“ಶ್ರೀರಾಮಕೃಷ್ಣರಿಗೆ ಕಾಳಿದರ್ಶನದ ಘಟನೆ ಸಾಧಕರಿಗೆ ದಾರಿದೀಪ”- ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಅಭಿಮತ.

ಚಳ್ಳಕೆರೆ- ಶ್ರೀರಾಮಕೃಷ್ಣರಿಗೆ ಭವತಾರಿಣಿ ಕಾಳಿಮಾತೆಯು ದರ್ಶನ ನೀಡಿದ ಘಟನೆ ಆಧ್ಯಾತ್ಮಿಕ ಸಾಧಕರಿಗೆ ದಾರಿದೀಪವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ತಿಳಿಸಿದರು.

ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಗತ್ತಿನ ಜನರು ಲೌಕಿಕ ಜೀವನದ ಸುಖಕ್ಕಾಗಿ ಹಾತೊರೆದರೆ ಭಗವಾನ್ ಶ್ರೀರಾಮಕೃಷ್ಣರು ಕಾಳಿಮಾತೆಯ ದರ್ಶನಕ್ಕಾಗಿ ನಿರಂತರವಾಗಿ ವ್ಯಾಕುಲತೆಯಿಂದ ಪ್ರಾರ್ಥಿಸುತ್ತಿದ್ದರು. ವ್ಯಾಕುಲತಯ ಮೊರೆಗೆ ಅವರಿಗೆ ಕಾಳಿಯ ಭವ್ಯದರುಶನ ಭಾಗ್ಯ ಲಭಿಸುತ್ತದೆ.

ಆದ್ದರಿಂದ ನಾವು ಸಹ ಭಗವಂತನನ್ನು ಪರಮ ವ್ಯಾಕುಲತೆಯಿಂದ ಪ್ರಾರ್ಥಿಸಿ ಅವನ ದರುಶನವನ್ನು ಪಡೆಯಬಹುದು ಎಂದರು.ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ , ಹನುಮಾನ್ ಚಾಲೀಸ್ ಪಠಣ, ವಿಶೇಷ ಭಜನೆ ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಸತ್ಸಂಗ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ, ಅನುಸೂಯ ರಾಘವೇಂದ್ರ, ಪ್ರಮೀಳಾ ಜಗದೀಶ್, ಗೀತಾ ಸುಂದರೇಶ್ ದೀಕ್ಷಿತ್,ಪಂಕಜ ಚೆನ್ನಪ್ಪ, ಸರ್ವಮಂಗಳ ಶಿವಣ್ಣ, ಸರಸ್ವತಿ,ಲಕ್ಷ್ಮೀದೇವಮ್ಮ, ಚಂದ್ರಕಲಾ,ರಾಧಾ, ಭಾರ್ಗವಿ,ಶಿಲ್ಪ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!