ಚಳ್ಳಕೆರೆ :ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು.
ಸೋಮವಾರ ನಗರದ ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವದೊಂದಿಗೆ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಿತು.

ಬೆಳಗ್ಗೆಯಿಂದಲೇ ತಮ್ಮ ನೆಚ್ಚಿನ ಕಣ್ಮಣಿ ಸಚಿವ ಡಿ. ಸುಧಾಕರ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಶ್ರೀಗಳು, ಗಣ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಸಾರ್ವಜನಿಕರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಪುಷ್ಪಾಲಂಕೃತ ವಾಹನದಲ್ಲಿದ್ದ ಪಾರ್ಥಿವ ಶರೀರದ ಮೆರವಣಿಗೆಯುದ್ದಕ್ಕೂ ಜನರು ರಸ್ತೆಬದಿ ನಿಂತು ಅಂತಿಮ ನಮನ ಸಲ್ಲಿಸಿದರು. ಮೆರವಣಿಗೆ 12.30ಕ್ಕೆ ಸುಧಾಕರ್ ಕ್ರೀಡಾಂಗಣಕ್ಕೆ ತಲುಪಿ, ಸಾರ್ವಜನಿಕರಿಗೆ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಯಿತು. ಗಣ್ಯರಿಗೆ, ಮುಖಂಡರಿಗೆ ಮತ್ತು ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಯುದ್ದಕ್ಕೂ ಭಜನಾ ತಂಡ ಹಾಡು ಮೊಳಗಿಸಿತು. ಅಲ್ಲಿಂದ 3.30ರಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಾವಗಡ ರಸ್ತೆಯ ಮುಕ್ತದಾಮಕ್ಕೆ 4.30ಕ್ಕೆ ತಲುಪಿತು.

ಮುಖ್ಯಮಂತ್ರಿ ಹಾಗೂ ಗಣ್ಯರು ಭಾಗಿ:


ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ಅಂತ್ಯಕ್ರಿಯೆ ಪಾಲ್ಗೊಗೊಂಡಿದ್ದರು. ಅಗಲಿದ ನಾಯಕನಿಗೆ ಗೌರವ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಆಗಮಿಸಿದ್ದರು, ಸಿದ್ಧತೆಗಳು ಪೂರ್ಣಗೊಂಡಿವೆ.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸುಗಮವಾಗಿ ದರ್ಶನ ಪಡೆಯಲು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ಬಿಗಿ ಬಂದೋಬಸ್ತ್ ಕೈಗೊಳ್ಳಾಗಿತ್ತು.

ಪೂಜೆ ವಿಧಿ ವಿಧಾನ :


ಅಂತಿಮ ದರ್ಶನ ಪಡೆದ ಶ್ರೀಗಳು:


ಸಕಲ ಸರಕಾರಿ ಗೌರವ


ಡಿ. ಸುಧಾಕರ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಗೌರವ ವಂದನೆ ಸಲ್ಲಿ ಸಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿ ಸಿಎಂ ಸಮ್ಮುಖದಲ್ಲೇ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.

ನಂತರ ಪಾರ್ಥಿವ ಶರೀರದ ಮೆ ಹೊದಿಸಿದ ರಾಷ್ಟ್ರಧ್ವಜವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕುಟುಂಬದ ವರ್ಗದ ಸಚಿವ ಡಿ.ಸುಧಾಕರ್ ಅವರ ಪತ್ನಿ ಹರ್ಷಿಣಿ ಪುತ್ರ ಸುಹಾಸ್ ರವರಿಗೆ ರಾಷ್ಟ್ರ ಧ್ವಜ ಬಲವನ್ನು ಹಸ್ತಾಂತರ ಮಾಡಿದರು.

ಡಿ.ಸುಧಾಕರ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನಸ್ತೋಮ


ಡಿ. ಸುಧಾಕರ್ ಅವರು ಎಲ್ಲಾ ಸಮುದಾಯಗಳ ವಿಶ್ವಾಸವನ್ನು ಗಳಿಸಿದಂತಹ ನಾಯಕರಾಗಿದ್ದರು. ಸಚಿವರಾಗಿ ಅವರು ನಾಡಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಭದ್ರಾ ಯೋಜನೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದದ್ದು. ಅವರ ದಿಢೀರ್ ಅಗಲಿಕೆಯು ಇಡೀ ಜಿಲ್ಲೆಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ’ ಎಂದು ಸಂತಾಪ ಸೂಚಿಸಿದರು.
-ಮಾದಾರ ಚನ್ನಯ್ಯ ಶ್ರೀಗಳ

ರಾಜಕೀಯ ಗಣ್ಯರಿಂದ ದರ್ಶನ:


ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್, ಗೃಹ ಸಚಿವ ಡಾ.ಪರಮೇಶ್ವರ್, ಜಮೀರ್ ಅಹಮದ್, ಈಶ್ವರ್ ಖಂಡ್ರೆ, ಚೆಲುವ ರಾಯಸ್ವಾಮಿ, ಎಂ.ಬಿ.ಪಾಟೀಲ್, ಶರಣಪ್ಪ ದರ್ಶನಾಪುರ, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಕೃಷ್ಣ ಭೈರೇಗೌಡ, ಶಾಸಕ ಟಿ.ರಘುಮೂರ್ತಿ, ಶಾಸಕ ಕೆಸಿ.ವೀರೇಂದ್ರ ಪಪ್ಪಿ,

ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿಎನ್.ಚಂದ್ರಪ್ಪ , ಇತರರಿದ್ದರು.

About The Author

Namma Challakere Local News
error: Content is protected !!