ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕಳ್ಳರು ಕೈ ಚಳಕ ತೋರಿ ಮೊಬೈಲ್ ಕಳ್ಳತನ ಮಾಡಿರುವ ವಸ್ತುಗಳನ್ನು ಮತ್ತೆ ವಾರಸುದಾರರಿಗೆ ಇಂತಿರುಗಿಸಿದ ಖಾಕಿ ಪಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೌದು
ವಿಜ್ಞಾನಿ ನಗರದಲ್ಲಿ ಸ್ವಲ್ಪ ಯಾಮಾರಿದರೂ ಮೊಬೈಲ್ ಕೈ ತಪ್ಪುತ್ತಿತ್ತು. ಕೆ.ಎಸ್ ಆರ್ಟಿಸಿ ಬಸ್ ಹತ್ತುವಾಗ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ತೆಗೆದು ಕೊಳ್ಳುವಾಗ ಮೊಬೈಲ್ ಕಳ್ಳತನವಾಗುತ್ತಿತ್ತು. ಆದರೆ ಈಗ ಪೊಲೀಸ್ ಇಲಾಖೆಯ ಕಾರ್ಯದಿಂದ ಕಳೆದಿದ್ದ ಮೊಬೈಲ್ ಮಾಲೀಕರ ಕೈ ಸೇರುವಂತಾಗಿದೆ…..
ಅಷ್ಟಕ್ಕೂ ಒಂದು ಎರಡು ಮೊಬೈಲ್ ಅಲ್ಲ, 2 ಲಕ್ಷ ಮೌಲ್ಯದ 10 ಮೊಬೈಲ್ಗಳನ್ನ ಚಳ್ಳಕೆರೆ ಡಿವೈಎಸ್ ಪಿ ಟಿ.ಬಿ ರಾಜಣ್ಣ ನೇತೃತ್ವದಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಮೊಬೈಲ್ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ….
ಚಳ್ಳಕೆರೆ ನಗರದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹತ್ತು ಜನ ಮೊಬೈಲು ಕಳೆದುಕೊಂಡ ಮಾಲೀಕರನ್ನ ಕರೆದು ಅವರಿಗೆ ನೆರವಾಗಿ 2 ಲಕ್ಷ ರೂಪಾಯಿ ಮೌಲ್ಯದ 10 ಮೊಬೈಲ್ ಗಳನ್ನ ಹಸ್ತಾಂತರ ಮಾಡಲಾಯಿತು……
ಒಂದು ಚಿತ್ರದುರ್ಗ ಮೊಬೈಲ್ ಆದರೆ ಮತ್ತೋಂದು ನಾಯಕನಹಟ್ಡಿ ಯವರದು ಉಳಿದಂತೆ 8ಮೊಬೈಲ್ ಕಳೆದಂತಹ ಮೊಬೈಲ್ ಪೋನ್ ಗಳಾಗಿದ್ದವು.
. ಮೊಬೈಲ್ ಫೋನ್ ಹಸ್ತಾಂತರದ ವೇಳೆ ಪಿಎಸ್ಐ ಧರಪ್ಪ ಬಾಳಪ್ಪ ದೊಡ್ಮನಿ, ಪೊಲೀಸ್ ಪೇದೆಗಳಾದ ಶಿವರಾಜ್, ಶಿವಾನಂದ ,ಮಡಿವಾಳ, ಶ್ರೀಧರ್, ಶ್ರೀನಿವಾಸ್ ಹಾಗೂ ವಾಹನ ಚಾಲಕ ಶ್ರೀನಿವಾಸ್ ಇದ್ದರು……

