ಚಳ್ಳಕೆರೆ :

ಬಿಜೆಪಿ ಸರ್ಕಾರದಲ್ಲಿ ಜನರು ಹಸಿವಿನಿಂದ ಇರುವುದನ್ನು ಗಮನಿಸಿದ ಕಾಂಗ್ರೆಸ್ ಸರಕಾರ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ತಲಾ ಹತ್ತು ಕೆಜಿ ಅಕ್ಕಿ ನೀಡುವ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದೆ ಎಂದು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.

ಅವರು ನಗರದ ಹಳೆ ನಗರದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಅಕ್ಕಿಯನ್ನು ವಿತರಿಸಿ ಮಾತನಾಡಿದರ,

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ರಾಜ್ಯದ ಜನತೆಗೆ ಹಸಿವು ಮುಕ್ತ ರಾಜ್ಯ ವನ್ನಾಗಿ ಮಾಡಿ ಮಾದರಿಯಾಗಿದೆ ಅದರಂತೆ ಹಸಿವಿನಿಂದ ಬಳಲುತ್ತಿರುವ ರನ್ನು ಗಮನಿಸಿದ ನಮ್ಮ ಸರ್ಕಾರ ತಲಾ ಹತ್ತು ಕೆಜಿ ಅಕ್ಕಿ ನೀಡುವ ಮೂಲಕ ಹಸಿವು ಮುಕ್ತ ರಾಜ್ಯ ಎಂದು ಮಾಡಿದೆ ಎಂದರು.

ಇದೇ ಸಂಧರ್ಭದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯ ಹಳೆನಗರದ ವೀರಭದ್ರಪ್ಪ ಮಾತನಾಡಿದರು,
ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ,
ಸದಸ್ಯರಾದ ಆಂಜನೇಯ, ಗುಜ್ಜಾರಪ್ಪ, ಕವಿತಾ ದಳವಾಯಿ ಮೂರ್ತಿ, ಮುಜೀಬ್, ಪುರಶೋತ್ತಮ್ಮ, ಹಳೆ ನಗರದ ನ್ಯಾಯ ಬೆಲೆ ಅಂಗಡಿಯ ಮಾಲೀಕ ಲಕ್ಷ್ಮಣ್, ಜಯಣ್ಣ, ಶಿರಸ್ತೆದಾರ್ ಶ್ರೀನಿವಾಸ್, ‌ರುದ್ರಮುನಿ,
ಫಲಾನುಭಿಗಳು ಇತರರು ಇದ್ದರು

About The Author

Namma Challakere Local News
error: Content is protected !!