ಬುದ್ದನ ಜ್ಞಾನ ಮಾರ್ಗ ಅರಿತರೆ ಮನುಷ್ಯ ಜೀವನ ಸಾರ್ಥಕವಾಗಲಿದೆ ಲೋಕಾಯುಕ್ತ ಪೊಲೀಸ್ ಜಿ.ಬಿ. ಉಮೇಶ್.
ನಾಯಕನಹಟ್ಟಿ:: ಬುದ್ಧ-ಬಸವ-ಅಂಬೇಡ್ಕರ್ ಅವರ ಆದರ್ಶಗಳು ಇಡೀ ಜಗತ್ತಿಗೆ ಸರ್ವಕಾಲಿಕವಾಗಿವೆ ಎಂದು ಲೋಕಾಯುಕ್ತ ಪೊಲೀಸ್ ಜಿ.ಬಿ. ಉಮೇಶ್ ಹೇಳಿದರು.
ಹೋಬಳಿಯ ಎನ್ ಮಹದೇವಪುರ ಗ್ರಾ.ಪಂ. ವ್ಯಾಪ್ತಿಯ ಕುದಾಪುರ ಗ್ರಾಮದ ಬಸವನ ಮಹಾಮನೆಯಲ್ಲಿ ಬುದ್ಧ ಜಯಂತಿ ಆಚರಣೆಯಲ್ಲಿ ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು.ಅಸಮಾನತೆ ಕಂದಾಚಾರಗಳಂತಹ, ಆಚರಣೆಗಳಿಂದ ನೆರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ ಶಾಂತಿ ಸಮಾನತೆಯ ದಾರಿ ತೋರಿದವರು ಭಗವಾನ್ ಬುದ್ಧರು ಸಮ ಸಮಾಜದ ನಿರ್ಮಾಣಕ್ಕಾಗಿ ಸಮಾಜವನ್ನು ಸರಿದಾರಿಗೆ ತರುವ ಮೂಲಕ ಶ್ರಮಿಸಿದವರು ಗೌತಮ ಬುದ್ಧರು ಆದ್ದರಿಂದ ಪ್ರತಿಯೊಬ್ಬರೂ ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನ ಮೈಗೂಡಿಸಿಕೊಂಡು ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿ. ಪಾಪನಾಯಕ,ಎ. ಚಿನ್ನನಾಯಕ,ದಾಸರ ಬೋರಯ್ಯ, ಎನ್ ಮಹದೇವಪುರ ಗ್ರಾ. ಪಂ. ಸದಸ್ಯ ಪಾಲಯ್ಯ , ಮುಕ್ಕಣ್ಣ, ಎ.ಎಂ.ಪಾಲಾಕ್ಷ , ಪಿ.ಎಸ್. ಮಲ್ಲಿಕಾರ್ಜುನ್, ಬಿಎಂಟಿಸಿ ನಾಗರಾಜ್, ಪಿ. ಉಮೇಶ್, ಬಸಮ್ಮ, ಮಂಜಮ್ಮ, ಜಿ.ಬಿ. ಲೋಕೇಶ್, ಬೋರಣ್ಣ, ಶಾಂಭಾವಿ, ಹರಿಪ್ರಿಯ, ಗಂಗೋತ್ರಿ, ವಿವೇಕಾನಂದ, ಪಿ.ಜಿ. ಗುರುಪ್ರಸಾದ್, ಸಮಸ್ತ ಕುದಾಪುರ ಗ್ರಾಮಸ್ಥರು ಇದ್ದರು

