ಚಳ್ಳಕೆರೆ :
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಆರೋಗ್ಯ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಬಾಪೂಜಿ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥಕ್ಕೆ ನಗರಸಭೆ ಅಧ್ಯಕ್ಷೆ ಆರ್. ಮಂಜುಳಾ ಪ್ರಸನ್ನ ಕುಮಾರ್ ಹಸಿರು ನಿಶಾನ ತೋರಿ ಚಾಲನೆ ನೀಡಿದರು.
ನಗರದ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಜಾಗೃತಿ ಜಾಥಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಆರ್ ಮಂಜುಳಾ ಪ್ರಸನ್ನ ಕುಮಾರ್ ಮಾತನಾಡಿ, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನಲ್ಲಿ ಇರುವ ಪರಿಸರವನ್ನು ತಾವೇ ಸ್ವಚ್ಚತೆ ಮಾಡಿಕೊಳ್ಳುವುದರ ಮೂಲಕ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕು, ನಗರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿದ್ದಲ್ಲಿ ಮಾತ್ರ ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ಸಾಧ್ಯವಾಗುತ್ತದೆ.
ಭಯಾನಕ ಖಾಯಿಲೆಗಳಾದ ಡೆಂಗ್ಯೂ ,ಮಲೇರಿಯಾ ಹೀಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಎಚ್ಚರಗೊಳ್ಳಬೇಕು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಮುನ್ನ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸುಚಿತ್ವ ವಾಗಿಟ್ಟುಕೊಳ್ಳುವ ಮೂಲಕ ರೋಗಮುಕ್ತ ನಗರವನ್ನಾಗಿ ಮಾಡಬಹುದು ಎಂದು ಹೇಳಿದರು.
ಇನ್ನೂ ನಗರ ಸಭೆಯ ಉಪಾಧ್ಯಕ್ಷೆ ಕವಿತಾ ಬೋರಯ್ಯ, ಆರೋಗ್ಯ ಇಲಾಖೆಯ ಕುದಾಪುರ ತಿಪ್ಪೇಸ್ವಾಮಿ, ಪೋಲಿಸ್ ಇಲಾಖೆ , ನಗರಸಭೆ ಸಿಬ್ಬಂದಿ ಹಾಗೂ ಬಾಪೂಜಿ ಕಾಲೇಜ್ ವಿದ್ಯಾರ್ಥಿಗಳು ಜಾಥದಲ್ಲಿ ಜಾಗೃತಿ ಮೂಡಿಸಿದರು.

