ಚಳ್ಳಕೆರೆ : ಚಿತ್ರದುರ್ಗ: ಜನರ ಸೇವೆಯೆ ನನಗೆ ಹಬ್ಬದ ಸಂಭ್ರಮ
ಮಾಜಿ ಸಚಿವ ಹೆಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿ
ಬುಧವಾರ ಸಮೀಕ್ಷೆಯಲ್ಲಿ ಪಾಲ್ಗೊಂಡು, ‘ನಾನು ಯಾವ
ಹಬ್ಬಗಳನ್ನೂ ಆಚರಿಸುವುದಿಲ್ಲ, ಯಾವ ಪೂಜೆಯನ್ನೂ
ಮಾಡುವುದಿಲ್ಲ.
ಜನರೇ ನನಗೆ ದೇವರು, ಜನಸೇವೆ ಹಬ್ಬಗಳ
ಸಂಭ್ರಮ’ ಎಂದು ಹೇಳಿದರು. ಇಂದು ಹಬ್ಬವಿದ್ದರೂ ಸಹ
ಗಾಂಧಿನಗರದ ಪ್ರದೇಶಕ್ಕೆ ಬಂದು ಸಮೀಕ್ಷೆ ವೀಕ್ಷಣೆಯ ಜೊತೆಗೆ
ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ
ಎಂದು ತಿಳಿಸಿದರು.

