ಚಳ್ಳಕೆರೆ : ಚಳ್ಳಕೆರೆ: ಸಿಮೆಂಟ್ ಅಂಗಡಿ ಕಳ್ಳನ ಬಂಧಿಸಿದ
ಪೊಲೀಸರು
ಚಳ್ಳಕೆರೆ ನಗರದಲ್ಲಿ 15 ದಿನಗಳ ಹಿಂದೆ ಸಿಮೆಂಟ್
ಅಂಗಡಿಯೊಂದರಲ್ಲಿ ಕಳವು ಮಾಡಿದ್ದ ಆರೋಪಿಯನ್ನು
ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಂಧ್ರ ಮೂಲದ ನಾಗರಾಜ್
ಎಂಬಾತನನ್ನು ಬಂಧಿಸಿ, ಇಂದು ಅಂಗಡಿಗೆ ಕರೆತಂದು ಸ್ಥಳ
ಮಹಜರು ನಡೆಸಿದ್ದಾರೆ. ಆರೋಪಿ ಕಳವು ಮಾಡಿದ್ದ ನಗದು
ಹಣ ಮತ್ತು ಕಬ್ಬಿಣವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆತನನ್ನು
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

