ಚಳ್ಳಕೆರೆ : ಚಿತ್ರದುರ್ಗ: ಕೋಟೆ ನೋಡಲು ಬಂದ ಪ್ರವಾಸಿ ಕಾಲು
ಜಾರಿ ಬಿದ್ದು ಅವಾಂತರ!
ದಸರಾ ರಜೆ ಕಳೆಯಲು ಚಿತ್ರದುರ್ಗದ ಕೋಟೆಗೆ ಬಂದಿದ್ದ ವಿನಿತಾ
ಭೂಪಾಲ್ ಎಂಬ ಮಹಿಳೆ, ಅಕ್ಕ ತಂಗಿ ಹೊಂಡದ ಬಳಿ ಕಾಲು
ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ಮಿತ್ರರ
ಸಹಾಯದಿಂದ ಅವರನ್ನು ಸ್ಪೆಚ್ಚರ್ ಮೂಲಕ ಕೆಳಗೆ ತಂದು,
ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು
ಸಂಬಂಧಿಕರು ತಿಳಿಸಿದ್ದಾರೆ.

