.
ಚಳ್ಳಕೆರೆ ತಾಲೂಕಿನ ನಗರದಲ್ಲಿ ಗುಂಡಿಗಳ ಪೂಜೆ ಕಾರ್ಯಕ್ರಮ
ನಗರದ ಬಹುತೇಕ ಪಾಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಹಳ್ಳಿ ಭಾಗದ ರಸ್ತೆಗಳಲ್ಲಿ ಜನರಿಗೆ ಸಂಪರ್ಕ ಇರುವಂತಹ ರಸ್ತೆಗಳು ಮೂಲಭೂತವಾದಂತಹ ಸೌಲಭ್ಯಗಳಲ್ಲಿ ಒಂದಾದಂತಹ ಈ ರಸ್ತೆಗಳು ಗುಂಡಿಗಳು ಬಿದ್ದು ಹಲವಾರು ವರ್ಷಗಳು ಕಳೆದರು ನಗರಸಭೆ ಅಧಿಕಾರಿಗಳಾಗಲಿ ಪಿಡಬ್ಲ್ಯೂಡಿ ಅಧಿಕಾರಿಗಳಾಗಲಿ ಹಾಗೂ ಸ್ಥಳೀಯ ಶಾಸಕರಾಗಲಿ ಈ ಬಗ್ಗೆ ಯಾವುದೇ ಜನರ ಹಿತಕ್ಕಾಗಿ ಆಸಕ್ತಿ ವಹಿಸದೆ ಇರುವುದರಿಂದ ಈ ಗುಂಡಿಗಳು ಕ್ರಮೇಣ ಕ್ರಮೇಣ ದೊಡ್ಡದಾಗಿ ಈಜುಕೊಳದಂತಹ ಗುಂಡಿಗಳಿಗೆ ಇವತ್ತು ಚಳ್ಳಕೆರೆ ತಾಲೂಕು ಹಾಗೂ ಚಳ್ಳಕೆರೆ ನಗರದ ಕೆ ಆರ್ ಎಸ್ ಪಕ್ಷದ ಘಟಕದ ಪದಾಧಿಕಾರಿಗಳು ಸೇರಿ ಈ ಗುಂಡಿ ಪೂಜೆ ಕಾರ್ಯಕ್ರಮವನ್ನ ವಿನೂತನವಾಗಿ ಆಚರಿಸಲಾಗಿದೆ.
ಈ ಕಾರ್ಯಕ್ರಮವನ್ನು ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಸಿ ಮಹೇಶ್ ನಗರಂಗೆರೆ ಅವರ ನೇತೃತ್ವದಲ್ಲಿ ತಾಲೂಕ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಪ್ರಧಾನ ಕಾರ್ಯದರ್ಶಿಯಾದ ಪಾಪಯ್ಯ ಉಪಾಧ್ಯಕ್ಷರಾದ ಜಬಿವುಲ್ಲಾ ಹಾಗೂ ನಗರ ಘಟಕದ ಅಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ , ಪ್ರಧಾನ ಕಾರ್ಯದರ್ಶಿ ಧನಂಜಯ, ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಚಿತ್ತಯ್ಯ ಸೈನಿಕರೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಲಾಯಿತು.
ಚಳ್ಳಕೆರೆ ತಾಲೂಕಿನ ತಾಲೂಕ್ ಆಫೀಸ್ ನಲ್ಲಿ ಕಚೇರಿಗೆ ಆಗಮಿಸುವ ಅಧಿಕಾರಿಗಳಿಗೆ ಗುಲಾಬಿ ಹೂವು ಕೊಟ್ಟು ಸ್ವಾಗತ ಕೋರುವ ಕಾರ್ಯಕ್ರಮ
ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಬೆಳೆಗೆ 10:30 ಸಮಯದಲ್ಲಿ ಕಚೇರಿಗೆ ಆಗಮಿಸುವಂತಹ ಅಧಿಕಾರಿಗಳಿಗೆ ಕಚೇರಿಯ ವೇಳೆ ಸಮಯಕ್ಕೆ ಬಾರದೆ ಇರುವ ಹಾಗೂ ಕಚೇರಿಯ ವೇಳೆ ಲೇಟಾಗಿ ಬರುವ ಅಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ಚಳ್ಳಕೆರೆ ತಾಲೂಕು ಸಮಿತಿ ಹಾಗೂ ಚಳ್ಳಕೆರೆ ನಗರದ ಪದಾಧಿಕಾರಿಗಳು ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಸಿ ಮಹೇಶ್ ನಗರಂಗೆರೆ ಇವರ ನೇತೃತ್ವದಲ್ಲಿ ಗುಲಾಬಿ ಹೂವು ಕೊಟ್ಟು ಸ್ವಾಗತ ಕೋರಲಾಯಿತು.
ಚಳ್ಳಕೆರೆ ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಜಬಿವುಲ್ಲಾ, ಪ್ರಧಾನ ಕಾರ್ಯದರ್ಶಿ ಪಾಪಯ್ಯ ,ಕಾರ್ಯದರ್ಶಿ ಶ್ರೀನಿವಾಸ್, ಚಿತ್ತಯ್ಯ ಹಾಗೂ ಚಳ್ಳಕೆರೆ ನಗರದ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ ಪ್ರಧಾನ ಕಾರ್ಯದರ್ಶಿ ಧನಂಜಯ ಸೈನಿಕರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

