ಚಳ್ಳಕೆರೆ :

ಕಾಡುಗೊಲ್ಲರಲ್ಲಿ ಪ್ರಪ್ರಥಮ ನಾಡೋಜ ಪ್ರಶಸ್ತಿಗೆ ಭಾಜನರಾದ ಕೀರ್ತಿ ಶೇಷು ಶ್ರೀಮತಿ ಸಿರಿಯಜ್ಜಿ ನಿಧನವರಾಗಿದ್ದು ದಿನಾಂಕ 03-04 -2009.
ಇವರು ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿ ನಿವಾಸಿ. ಹಾಗೂ ಹೆಸರಾಂತ ಹಿರಿಯ ಸಾಹಿತಿ ದಿವಂಗತ ಬೆಳಗೆರೆ ಕೃಷ್ಣ ಶಾಸ್ತ್ರಿ ಅವರ ಅನುನಾಯಿ. ಅವರು ಇವರ ಜಾನಪದ ವಿದ್ವತ್ ಗ್ರಹಿಸಿ ಈ ನಾಡಿಗೆ ಇವರನ್ನು ಪರಿಚಯಿಸಿದ್ದಾರೆ.

ಸನ್ಮಾನ್ಯ ರಾಮಕೃಷ್ಣ ಹೆಗಡೆ, ಜೆಎಚ್ ಪಟೇಲ್, ಗುಂಡೂರಾವ್, ಎಚ್ ಡಿ ಕುಮಾರಸ್ವಾಮಿ ಮುಂತಾದ ಈ ನಾಡಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಶ್ರೀಮತಿ ಸಿರಿಯಜ್ಜಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ರವರು ಜಾನಪದ ಕೋಗಿಲೆ ಜಾನಪದ ಸಿರಿ ಮುಂತಾದ ಪ್ರಶಸ್ತಿ ಗಳನ್ನು ನೀಡಿ ಗೌರವಿಸಿದ್ದಾರೆ.

ಅಲ್ಲದೇ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ದವರು ಸರ್ವ ಶ್ರೇಷ್ಠ ನಾಡೋಜ ಪ್ರಶಸ್ತಿಯನ್ನು 2004 ರಲ್ಲಿ ನೀಡಿ ಗೌರವಿಸಿದ್ದಾರೆ. ಇವರ 10 ಸಾವಿರಕ್ಕೂ ಮೇಲ್ಪಟ್ಟು ಜಾನಪದ, ದೇವರ ಪದಗಳು ಹಾಗೂ ಸೋಬಾನ ಪದಗಳನ್ನು ಸಂಗ್ರಹಿಸಿ ಹತ್ತು ಸಾವಿರ ಸಿರಿ ಬೆಳಗು ಎಂಬ ಕೃತಿಯನ್ನು ಈ ನಾಡಿನ ಹೆಸರಾಂತ ಸಾಹಿತಿ ಡಾ. ಕೃಷ್ಣಮೂರ್ತಿ ಹನೂರವರು ರಚಿಸಿದ ಗ್ರಂಥವನ್ನು ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿದ್ದಾರೆ.

ಇವರ ಸಮಾಧಿ ನಿರ್ಲಕ್ಷಕ್ಕೆ ಒಳಪಟ್ಟಿದ್ದು ಇದನ್ನ ಅರಿತ ದೂರದ ಮೈಸೂರಿನ ವಾಸಿ ಹಾಗೂ ಇದೆ ಸಮಾಜದ ಹಿರಿಯ ವಿಶ್ರಾಂತ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಡಾ . ಬಿ ಚಿಕ್ಕಪ್ಪಯ್ಯ ಸ್ಥಳ ತನಿಖೆ ಮಾಡಿ ಡಿ ವೈ ಎಸ್ ಪಿ ರಾಜಣ್ಣ ಮತ್ತು ಸಮಾನ ಮಸ್ಕರ ಆರ್ಥಿಕ ಮುಂತಾದ ಸಹಕಾರದಿಂದ ಇಂದು ಅವರ ಸಮಾಧಿ ಸ್ಥಳದಲ್ಲಿ ಒಂದು ಸುಂದರ ಭವ್ಯ ಪುಟ್ಟ ಸ್ಮಾರಕವನ್ನು ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ.

*ಜಾನಪದ ಕೋಗಿಲೆ, ನಾಡೋಜ ಸಿರಿಯಜ್ಜಿಯ ಸ್ಮಾರಕ ದಿನಾಂಕ 24 -08- 2025 ಭಾನುವಾರ ಬೆಳಿಗ್ಗೆ 11:00ಗಂಟೆಗೆ ಸಿರಿಯಜ್ಜಿಯ ನಾಡಿನ ಅಪಾರ ಬಂಧು ಬಳಗ- ಅಭಿಮಾನಿಗಳ ಸಮಕ್ಷಮದಲ್ಲಿ ಲೋಕಾರ್ಪಣೆ ಆಗಲಿದೆ. ಈ ಒಂದು ಕಾರ್ಯಕ್ರಮದಲ್ಲಿ ರಾಜ್ಯದ ಚಿತ್ರದುರ್ಗ ಜಿಲ್ಲೆ ಅಲ್ಲದೆ ಬೆಂಗಳೂರು ,ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಚಿಕ್ಕಮಂಗಳೂರು, ಹಾಸನ, ದಾವಣಗೆರೆ, ವಿಜಯನಗರ ಮತ್ತು ನೆರೆಯ ಗಡಿ ಆಂಧ್ರ ರಾಜ್ಯದ ಕಲ್ಯಾಣದುರ್ಗ, ರಾಯದುರ್ಗ, ಮಾಡಕ ಶಿರಾ ಮುಂತಾದ ಜಿಲ್ಲಾ ಹಾಗೂ ತಾಲೂಕುಗಳಿಂದ ಬಸ್ಸು ಹಾಗೂ ಲಘು ವಾಹನಗಳ ಮೂಲಕ ಅಂದು ಹಾಜರಾಗಿ ತಮ್ಮ ಗೌರವವನ್ನು ಸಲ್ಲಿಸಲಿದ್ದಾರೆ.
ದಯಮಾಡಿ ತಾವೆಲ್ಲರೂ ಅಂದು ಅಜ್ಜಿಯ ಸ್ಮಾರಕ ಲೋಕಾರ್ಪಣೆ ಸಮಾರಂಭಕ್ಕೆ ಹಾಜರಾಗಬೇಕಾಗಿ ಸವಿನಯ ಪ್ರಾರ್ಥನೆ. ಅಲ್ಲದೆ ಸುಪ್ರಸಿದ್ಧ ಸಾಹಿತಿ ಡಾ. ಕೃಷ್ಣಮೂರ್ತಿ ಅನುರ್ ಅಲ್ಲದೆ ಅವರ ಸ್ನೇಹಿತ ಅವರ ತಂಡ ಅಂದು ಸಮಾರಂಭದಲ್ಲಿ ಹಾಜರಾಗಿ ಸಿರಿಯಜ್ಜಿಯ ಜೀವನ ಮತ್ತು ಸಾಧನೆ ಮುಂತಾದ ವಿಷಯಗಳನ್ನು ಹಾಜರಿರುವ ಬಂಧುಗಳು ಹಾಗೂ ಅಭಿಮಾನಿಗಳಿಗೆ ಹಂಚಲಿದ್ದಾರೆ. ತಾವು ಈ ನಾಡಿನ ಸಮಸ್ತ ಜನಗಳ ಗ್ರಹಿಕೆಗಾಗಿ ತಮ್ಮ ಹೆಸರಾಂತ ದೈನಿಕ ದಲ್ಲಿಪ್ರಕಟಿಸಲು ಕೋರುತ್ತೇನೆ. ಹಾಗೂ ಈ ಶುಭ ಸಮಾರಂಭಕ್ಕೆ ತಾವುಗಳು ಹಾಜರಿರಬೇಕಾಗಿ ಕೋರಿದೆ.
ಡಾ. ಬಿ .ಚಿಕ್ಕಪ್ಪಯ್ಯ, ಧರ್ಮದರ್ಶಿ, ಶ್ರೀ ಲಕ್ಷ್ಮಿನರಸಿಂಹ ಚಾರಿಟಬಲ್ ಟ್ರಸ್ಟ್ (ರಿ)ಮೈಸೂರು ಹಾಗೂ ತಂಡದವರ ಪರವಾಗಿ.
9449852203

About The Author

Namma Challakere Local News
error: Content is protected !!