ಚಿತ್ರದುರ್ಗ: ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನ
ಕೊಡಿ
ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡದ ರಾಜ್ಯ
ಸರ್ಕಾರದ ವಿರುದ್ಧ ಎಐಟಿಯುಸಿ ವತಿಯಿಂದ ಸೋಮವಾರ
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ
ವೇಳೆ, ಬಿಸಿಯೂಟ ತಯಾರಕರು ಮುಖ್ಯಮಂತ್ರಿ ಸಿದ್ದರಾಮಯ್ಯ
ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ
ಸಲ್ಲಿಸಿದರು. ಜದಾವಣಗೆರೆ ರಸ್ತೆಯ ಕಮ್ಯುನಿಸ್ಟ ಕಚೇರಿಯಿಂದ
ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ
ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

About The Author

Namma Challakere Local News
error: Content is protected !!