ಚಿತ್ರದುರ್ಗ: ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ
ವಿಡಿಯೋ ವೈರಲ್
ಚಿತ್ರದುರ್ಗದ ಪಿವಿಎಸ್ ಆಸ್ಪತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಾತಿ
ನಿಂದನೆ ಮಾಡಿ, ಜೋಗತಿ ಮಹಿಳೆಗೆ ಹಲ್ಲೆ ಮಾಡಿರುವ ಘಟನೆ
ನಡೆದಿದೆ. ಆಸ್ಪತ್ರೆಯ ಕಾರು ಚಾಲಕ ಮಂಜುನಾಥ್, ನೆಲ ಒರೆಸುವ
ವಿಚಾರವಾಗಿ ಮಾತಿನ ವಾಗ್ವಾದ ನಡೆಸಿ ಮಹಿಳೆಯನ್ನು ಕೆಳಗೆ
ಬೀಳುವಂತೆ ಹಲ್ಲೆ ಮಾಡಿದ್ದಾನೆ. ಈ ಘಟನೆಯ ವಿಡಿಯೋ ವೈರಲ್
ಆಗಿದ್ದು, ಡಿಸಿಆರ್ ಇ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಹಲ್ಲೆ
ಪ್ರಕರಣ ದಾಖಲಾಗಿದೆ.

