ನಾಯಕನಹಟ್ಟಿ ಪಟ್ಟಣಕ್ಕೆ ಆಗಮಿಸಿದ ಮದಕರಿನಾಯಕರ ರಥಯಾತ್ರೆ.
ನಾಯಕನಹಟ್ಟಿ: ಮೇ. 9ರಂದು ಬೆಳಿಗ್ಗೆ 9 ಗಂಟೆಗೆ ಹೊಸದುರ್ಗ ತಾಲೂಕಿನ ಜಾನಕಲ್ ನಿಂದ ರಜವೀರ ಮದಕರಿ ನಾಯಕರಾ ಸ್ಮಾರಕ ನಿರ್ಮಾಣ ವೇದಿಕೆಯಿಂದ ರಥಯಾತ್ರೆ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ,ಚಳ್ಳಕೆರೆ, ನಾಯಕನಹಟ್ಟಿ, ಮೊಳಕಾಲ್ಮೂರು, ಹಿರಿಯೂರು, ಶಿರಾ, ಮೂಲಕ ಮೇ 15ರಂದು ಶ್ರೀರಂಗಪಟ್ಟಣ ತಲುಪುವ ಹಿನ್ನೆಲೆಯಲ್ಲಿ ಇಂದು ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಹೋಬಳಿಯ ನಾಯಕ ಸಮುದಾಯದ ವತಿಯಿಂದ ರಾಜವೀರ ಮದಕರಿ ನಾಯಕ ರಥಯಾತ್ರೆಕ್ಕೆ ಅದ್ದೂರಿ ಸ್ವಾಗತ ಕೋರಿ ರಾಜವೀರ ಮದಕರಿ ನಾಯಕರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿ.ಎಂ. ತಿಪ್ಪೇಸ್ವಾಮಿ, ಎತ್ತಿನಹಟ್ಟಿ ಗೌಡ್ರು ಮಾತನಾಡಿದ ಅವರು ರಾಜವೀರ ಮದಕರಿ ನಾಯಕರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ ಚಿತ್ರದುರ್ಗದ ಕೋಟೆಯನ್ನು ಆಳಿದ್ದಾರೆ ಹಾಗಾಗಿ ಅವರ ಇತಿಹಾಸದ ಮೇಲೆ ಬೆಳಕು ಚೆಲ್ಲಲು ರಥಯಾತ್ರೆಯೂ ಪಟ್ಟಣಕ್ಕೆ ಆಗಮಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಹಟ್ಟಿ ಮಲಪ್ಪ ನಾಯಕ ಸಂಘದ ನಿರ್ದೇಶಕರಾದ ಕಾಕಸೂರಯ್ಯ, ಭೀಮಗೊಂಡನಹಳ್ಳಿ ಹನುಮಣ್ಣ, ರೇಖಲಗೆರೆ ಎಂ ಚಿನ್ನಯ್ಯ, ಹಾಗೂ ಹೋಬಳಿಯ ವಿವಿಧ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಎಸ್. ಟಿ. ಬೋರಸ್ವಾಮಿ, ಜಿ.ಬಿ. ಮುದಿಯಪ್ಪ, ಗುಂತಕೋಲಮ್ಮನಹಳ್ಳಿ ಜಿ.ಎಂ. ಜಯಣ್ಣ ಜೆಸಿಬಿ ತಿಪ್ಪೇಸ್ವಾಮಿ ಕೆ.ಟಿ. ಮಲ್ಲಿಕಾರ್ಜುನ್, ಕೊಂಡಯ್ಯನ ಕಪಿಲೆ ಬೋರಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ, ಹೋಬಳಿಯ ಸಮಸ್ತ ನಾಯಕ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು

