ಚಳ್ಳಕೆರೆ ‌: ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಶ್ರೀ ಸಾಯಿ ಕ್ಯಾಡ್ ಸಂಸ್ಥೆ, ಬೆಂಗಳೂರು ಇದರ ಸಂಸ್ಥಾಪಕರಾದ ಮಂಜುನಾಥ ರೆಡ್ಡಿ ಹಾಗೂ ಇವರ ಪತ್ನಿ ಪ್ರತಿಮಾ ರೆಡ್ಡಿ ಇವರ ಮತ್ತು ಇವರ 30 ಸದಸ್ಯರ ಹಾಗೂ ತುರುವನೂರು ಗ್ರಾಮದ ಗ್ರಾಮಸ್ಥರ ಹಾಗೂ 20ಜನ ಐ.ಟಿ.ಐ.ಕಾಲೇಜಿನ ವಿದ್ಯಾರ್ಥಿಗಳ ಸಹಾಯದಿಂದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಗ್ರಾಮದ ಪೊಲೀಸ್ ಠಾಣೆ ಪಕ್ಕದ 5 ಎಕರೆ ಜಮೀನಿನಲ್ಲಿ ಇತ್ತೀಚಿಗೆ ಸ್ಥಾಪಿಸಿರುವ ಶ್ರೀ ಆಂಜನೇಯಸ್ವಾಮಿ ರೇಖಾ ಚಿತ್ರವನ್ನು ನಿರ್ಮಿಸಿದ್ದು, ಅದು ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿರುವುದರಿಂದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಸನ್ಮಾನಿಸಿ ಗ್ರೂಪ್ ಫೋಟೋ ತೆಗೆಸಿದರು.

ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ರವರು, ವಿಶ್ವ ದಾಖಲೆ ಪಡೆದ ಶ್ರೀ ಸಾಯಿ ಕ್ಯಾಡ್ ಸಂಸ್ಥೆಯ ಸಂಸ್ಥಾಪಕರು, ಸದಸ್ಯರುಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!