ಚಳ್ಳಕೆರೆ :
ಚಳ್ಳಕೆರೆ: ಕಟಾವಿಗೆ ಬಂದಿದ್ದ ಬೆಳೆ ನಾಶ
ಚಳ್ಳಕೆರೆ ಕ್ಷೇತ್ರದ ಮುದ್ದಾಪುರ ಹೊಸಹಟ್ಟಿ ಗ್ರಾಮದಲ್ಲಿ 3
ದಿನಗಳಿಂದ ವರುಣನ ಆರ್ಭಟಕ್ಕೆ ತಿಪ್ಪೇಸ್ವಾಮಿ ಅವರ 2 ಎಕರೆ
ಜಮೀನಿನಲ್ಲಿ ಹಸಿರು ಮೆಣಸಿನಕಾಯಿ, ಟೊಮೆಟೊ ಬೆಳೆ
ನಾಶವಾಗಿದೆ.
ಇನ್ನು 15 ದಿನ ಕಳೆದಿದ್ದರೆ ಟೊಮೆಟೊ ಕಟಾವು
ಮಾಡಬೇಕಿತ್ತು, ಆದರೆ ಬಿರುಗಾಳಿಗೆ ಸಿಲುಕಿ ಬೆಳೆ ನಾಶವಾಗಿದೆ.
ಮೇಲ್ಬಾಗದಿಂದ ಕಾಲುವೆಯಂತೆ ನೀರು ಹರಿದು ಬಂದು ಸಂಪೂರ್ಣ
ಕೊಚ್ಚಿ ಹೋಗಿದೆ. ಬೋರಪ್ಪನ 2 ಎಕರೆಯಲ್ಲಿದ್ದ ಸೇವಂತಿಗೆ
ಹೂವಿನ ಬೆಳೆ, ಬಿರುಗಾಳಿಗೆ ಸಿಲುಕಿ ಹಾಳಾಗಿದೆ ಎಂದು ಬೇಸರ
ವ್ಯಕ್ತಪಡಿಸಿದ್ದಾರೆ.

