ಚಳ್ಳಕೆರೆ :
ಹೊಳಲ್ಕೆರೆ: ಬೊಲೆರೋ ಪಿಕಪ್ ವಾಹನ ಡಿಕ್ಕಿ : ಇಬ್ಬರು
ಸಾವು, ಮೂವರಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಪಿಕಪ್ ವಾಹನ
ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು
ಸಾವನ್ನಪ್ಪಿರುವ ಘಟನೆ ಹೊಳಲ್ಕೆರೆಯ ಲೋಕದೊಳಲು ಗ್ರಾಮದ
ಬಳಿ ಇಂದು ಬೆಳಗಿನ ಜಾವ ನಡೆದಿದೆ. ಮೃತರನ್ನು ಧರಣೇಶ್,
ರಂಗಸ್ವಾಮಿ ಎಂದು ಗುರುತಿಸಿದ್ದು, ಬಸವರಾಜ್, ಪ್ರದೀಪ್, ಕೃಷ್ಣ,
ರುದ್ರೇಶ್ ಗಾಯಾಳುಗಾಗಿದ್ದಾರೆ.
ಗಾಯಾಳುಗಳನ್ನು ಹೊಳಲ್ಕೆರೆ
ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ
ಪರಿಶೀಲಿಸಿದ್ದಾರೆ.

