ಚಿತ್ರದುರ್ಗ: ಜಮೀನಿನಲ್ಲಿ ಪಾಲಿಗಾಗಿ ಹಲ್ಲೆ! ಆಸ್ಪತ್ರೆಗೆ
ದಾಖಲು
ಚಿತ್ರದುರ್ಗದ ಮುದ್ದಾಪುರದಲ್ಲಿ ಜಮೀನಿನಲ್ಲಿ ಪಾಲು ಕೇಳಿ
ಸಂಬಂಧಿಕರು ಹಲ್ಲೆ ನಡೆಸಿದ ಪರಿಣಾಮ ವೃದ್ಧನೊಬ್ಬನ
ಬಾಯಿಯ ಹಲ್ಲುಗಳು ಸಡಿಲಗೊಂಡಿವೆ. ಸಣ್ಣ ತಿಪ್ಪಣ್ಣ ಎಂಬುವರು
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಸಂಬಂಧಿಕರಾದ ಸಿದ್ದಪ್ಪ,
ಸೂರಪ್ಪ, ಲಕ್ಷ್ಮಿ ದೇವಿ, ಮನು ಮತ್ತಿತರರು ಏಕಾಏಕಿ ಬಂದು ಜಗಳ
ತೆಗೆದು ಹಾರೆಯಿಂದ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ
ಸಣ್ಣ ತಿಪ್ಪಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ
ನೀಡಿದ ತುರುವನೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ
ದಾಖಲಿಸಿಕೊಂಡಿದ್ದಾರೆ.

