ಹಿರಿಯೂರು: ಬಟ್ಟೆ ಕಳ್ಳನ ಕಳವು ದೃಶ್ಯ ಸಿಸಿ ಟಿವಿ
ಕ್ಯಾಮರಾದಲ್ಲಿ ಸೆರೆ
ಹಿರಿಯೂರಿನ ವೇದಾವತಿನಗರದ ನಾಲ್ಕನೇ ವಾರ್ಡಿನ
ಉರ್ದು ಶಾಲೆ ಮುಂಭಾಗದಲ್ಲಿ, ಮನೆಗೆ ನುಗ್ಗಿದ ಕಳ್ಳನೊಬ್ಬ
ಕೈಯಲ್ಲಿ ಮಾರಕಾಸ್ತ್ರ ಹಿಡಿದು ಒಣಗಲು ಹಾಕಿದ್ದ ಬಟ್ಟೆಗಳನ್ನು
ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಟ್ಟೆಗಳನ್ನು ತೆಗೆಯುತ್ತಿದ್ದಾಗ ಸಿಸಿಟಿವಿ ಕ್ಯಾಮರಾವನ್ನು ಗಮನಿಸಿದ
ಕಳ್ಳ, ಬಟ್ಟೆ ಕದಿಯುವುದನ್ನು ನಿಲ್ಲಿಸಿ, ಚಪ್ಪಲಿ ಹಾಕಿಕೊಂಡು
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆಯು
ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಕಳ್ಳರನ್ನು ಬಂಧಿಸಿ
ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!