ನಾಯಕನಹಟ್ಟಿ ಸಮುದಾಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರ
ನಾಯಕನಹಟ್ಟಿ :
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ದಿನದಂದೂ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕಣ್ಣಿನ ಇತರೆ ತೊಂದರೆಗಳಿಗೆ ಚಿಕಿತ್ಸೆ ನಡೆಯಲಾಯಿತ್ತು, ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಕರವೇ ಕನ್ನಡ ಸೇನೆ, ಮದರ್ ತೆರೇಸಾ ಗ್ರಾಮೀಣ ಸಂಸ್ಥೆ, ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೂಸೈಟಿ ಚಿತ್ರದುರ್ಗ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಚಿತ್ರದುರ್ಗ ಜಿಲ್ಲೆ ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿ ಚಳ್ಳಕೆರೆ, ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ದಿನದಂದೂ ಬೆಳಿಗ್ಗೆ ೯ ಗಂಟೆಯಿAದ ೨ ಗಂಟೆಯವರೆಗೆ ಶಿಬಿರ ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ಆಯ್ಕೆ ಆದವರನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ಶಸ್ತç ಚಿಕಿತ್ಸ್ಸಾಗೆ ೮೪ ರೋಗಿಗಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಲಾಗುವುದು ಎಂದು ಶಂಕರ ಕಣ್ಣಿನ ಆಸ್ಪತ್ರೆ ವೈದ್ಯಧಿಕಾರಿ ಡಾ|| ಕಾವೇರಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಲ್‌ಓ ಡಾ|| ನಾಗರಾಜ, ಶಂಕರ ಕಣ್ಣಿನ ಆಸ್ಪತ್ರೆ ರವಿ ಮತ್ತು ಸಿಬ್ಬಂದಿ ವರ್ಗ, ಡಾ|| ಪಾಂಚಿಜನ್ಯ, ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ, ಅಧ್ಯಕ್ಷ ನಾಗರಾಜ, ಕರವೇ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಮುತ್ತಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜಣ್ಣ, ಉಪಾಧ್ಯಕ್ಷ ರಾಘವೇಂದ್ರ, ಯುವ ಕಾರ್ಯದರ್ಶಿ ಪ್ರೇಮ್ ಕುಮಾರ್, ಪ್ರಸನ್ನ, ಉದಯ ಕಿರಣ್, ಮಮತ, ಪ್ರೇಮ, ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಲೋಕೇಶ್, ಸಂಗೇಶ್, ನಮ್ರತ, ಮಧು ಇನ್ನೂ ಇತರರು ಇದ್ದರು

