ಚಳ್ಳಕೆರೆ : ಒಂದು ಕಾಲದಲ್ಲಿ ರಾಜಕೀಯ ವಲಯದಲ್ಲಿ ಈಡಿ ರಾಜ್ಯವೇ ತಿರುಗಿ ನೋಡುವಾಗೆ ಆಪ್ತಮಿತ್ರರು ಹಾಗೂ ಪಕ್ಷದ ರಾಮ ಲಕ್ಷ್ಮಣರು ಎಂದು ಗುರುತಿಸಿಕೊಂಡಿರುವ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಈಗ ಪರಸ್ಪರ ಮುನಿಸು ಹಾಗೂ ತಿರುಗಿ ಬಿದ್ದಿದ್ದು ಮಾತಿನ ಮಲ್ಲ ಇದ್ದ ಮುಂದುವರಿಸಿದ್ದಾರೆ.
ಈಗಾಗಲೇ ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಆಪ್ತಮಿತ್ರರ ಮಾತಿನ ಯುದ್ದಕ್ಕೆ ಬ್ರೇಕ್ ಹಾಕಲು ವರಿಷ್ಠರು ಮುಂದಾಗುವ ವೇಳೆಗೆ ಅಭಿಮಾನಿಗಳ ಬಳಗದಲ್ಲಿ ವಾಕ್ಸಮರ ಬುಗೆಲೆದ್ದಿದೆ.
ಅದರಂತೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಶ್ರೀ ರಾಮುಲು ಅಭಿಮಾನ ಬಳಗ ಹಾಗೂ ನಾಯಕ ಸಮುದಾಯದ ಮುಖಂಡರು ಸ್ವಾಮೀಜಿಗಳು ಮಾತನಾಡುವ ಮೂಲಕ ಮಾಧ್ಯಮಗಳ ಮುಂದೆ ಮಾತನಾಡುವ ರಾಜಕೀಯ ನಾಯಕರು ನಾಲಿಗೆ ಬಿಗಿಡಿದುಕೊಂಡು ಮಾತನಾಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಯಕ ಸಮುದಾಯದ ಮಾಜಿ ಸಚಿವ ಬಿ.ಶ್ರೀರಾಮುಲು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕನನ್ನು ನಾನು ಬೆಳೆಸಿದ್ದೆ ಎನ್ನುವುದು ಶೋಭೆ ತರುವಂತದ್ದಲ್ಲ, ಇದರಿಂದ ನಮ್ಮ ನಾಯಕ ಸಮುದಾಯಕ್ಕೆ ಅವಮಾನಿಸಿದಂತಾಗಿದೆ ಈ ಕೂಡಲೇ ಶಾಸಕರಾದ ಜನಾರ್ಧನ್ ರೆಡ್ಡಿ ಅವರು ತಾವು ಹೇಳಿರುವ ಹೇಳಿಕೆಯನ್ನು ಹಿಂಪಡೆಯಬೇಕು ನಮ್ಮ ಸಮುದಾಯಕ್ಕೆ ಕ್ಷಮೆಯಾಚಿಸಬೇಕು ಎಂದು ನಾಯಕ ಸಮುದಾಯದ ಶ್ರೀರಾಮುಲು ಅಭಿಮಾನಿ ಬಳಗದ ಮುಖಂಡ ನವೀನ್ ನಾಯಕ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜಕೀಯವಾಗಿ ಮಾತನಾಡುವುದು ಅವರ ಅವರಿಗೆ ಬಿಟ್ಟಿದ್ದು ಆದರೆ ಒಬ್ಬ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕ ಸಮುದಾಯದ ನಾಯಕನನ್ನು ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಇದರಿಂದ ನಮ್ಮ ನಾಯಕ ಸಮುದಾಯಕ್ಕೆ ಶ್ರೀರಾಮುಲು ಅಭಿಮಾನಿ ಬಳಗಕ್ಕೆ ತುಂಬಾ ನೋವುಂಟು ಆಗಿದೆ, ಅವರ ಅಂತಸ್ತು ಶ್ರೀಮಂತಿಕೆ ಇದ್ದರೆ ಅವರಲ್ಲಿ ಇರಲಿ ಅದನ್ನು ಬಿಟ್ಟು ನಾನೇ ಬೆಳೆಸಿದ್ದು ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ, ಯಾರನ್ನು ಯಾರು ಬೇಳೆಸುವುದಿಲ್ಲ ಅವರ ಸಾಮರ್ಥ್ಯ ಇದ್ದೆ ಇರುತ್ತೆ, ಎಂದು ಕಿಡಿ ಕಾರಿದ್ದಾರೆ .
ಚಳ್ಳಕೆರೆ ತಾಲೂಕಿನ
ಡಿ.ಉಪ್ಪಾರಹಟ್ಟಿ ಮಠದ ಶ್ರೀ ಮಹರ್ಷಿ ವಾಲ್ಮೀಕಿ ಸಿದ್ದ ಸಿಂಹಾಸನ ಗುರುಪೀಠದ ವಾಲ್ಮೀಕಿ ಹರ್ಷನಾಂದ ಮಹಾ ಸ್ವಾಮೀಜಿ ಮಾತನಾಡಿ,
ಯಾವುದೇ ವ್ಯಕ್ತಿಗಳು ಸಮುದಾಯದಲ್ಲಿ ಪ್ರತಿನಿಧಿಸುವಂಥ ವ್ಯಕ್ತಿಗಳಿಗೆ ತಮ್ಮದೇ ಆದ ವರ್ಚಸ್ಸು ಸಮುದಾಯದ ಹೊಣೆಗಾರಿಕೆ, ಬದ್ದತೆ ಇರುತ್ತೆ,ಆದರೆ ಅವುಗಳನ್ನು ರಾಜಕೀಯವಾಗಿ ಮಾಧ್ಯಮದ ಮುಂದೆ ಬೀದಿ ರಂಪಾಟ ಮಾಡಬಾರದು, ರಾಜಕೀಯ ನಾಯಕರು ಕೊಡುವ ಹೇಳಿಕೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ರಾಜಕೀಯ ಮಾಡಬೇಕು ಆದರೆ ಬರೀ ವ್ಯಕ್ತಿ ಗತ ಹೇಳಿಕೆಗಳು ಕೊಡದೆ ಇರುವುದು ಅವರ ರಾಜಕೀಯ ಲಕ್ಷಣವಾಗುತ್ತದೆ. ಇದರಿಂದ ಸಮಾಜದ ಸಾಥ್ಯಹಾಳುಮಾಡದೆ, ಕಾಪಾಡುವ ಹೊಣೆಗಾರಿಕೆ ಅವರ ಮೆಲೆ ಇರುತ್ತದೆ ಎಂದರು.
ನಾಯಕ ಸಮಾಜದ ಮುಖಂಡ ಈಶ್ವರ ನಾಯಕ ಮಾತನಾಡಿ,
ನಾಯಕ ಸಮುದಾಯದ ಬಿ. ಶ್ರೀರಾಮುಲು ರವರು ತಮ್ಮದೇ ಆದ ವರ್ಚಸ್ಸು ರಾಷ್ಟ್ರ, ಹಾಗೂ ರಾಜ್ಯ ಮಟ್ಟದಲ್ಲಿ ಇಟ್ಟುಕೊಂಡಿದ್ದಾರೆ, ಆದರೆ ಅವರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ, ಇದರಿಂದ ನಮ್ಮ ನಾಯಕ ಸಮುದಾಯಕ್ಕೆ ನೋವುಂಟಾಗಿದೆ, ಎಂದರು.
ಇದೇ ಸಂಧರ್ಭದಲ್ಲಿ ಡಿ.ಉಪ್ಪಾರಹಟ್ಟಿ ಮಠದ ಶ್ರೀ ಮಹರ್ಷಿ ವಾಲ್ಮೀಕಿ ಸಿದ್ದ ಸಿಂಹಾಸನ ಗುರುಪೀಠದ ವಾಲ್ಮೀಕಿ ಹರ್ಷನಾಂದ ಮಹಾ ಸ್ವಾಮೀಜಿ , ನಾಯಕ ಸಮುದಾಯದ ಮುಖಂಡ ನವೀನ್ ನಾಯಕ, ಈಶ್ವರ ನಾಯಕ,
ಮೋಹನ್, ಅಶೋಕ, ರಂಗಸ್ವಾಮಿ, ಇತರರು ಹಾಜರಿದ್ದರು.


