ಚಳ್ಳಕೆರೆ : ಹೊರಗುತ್ತಿಗೆ ಆದಾರದ ಮೇರೆಗೆ ವಾಹನ ಸರಬರಾಜು ಮಾಡಿದ ಸಂಸ್ಥೆಯವರಿಗೆ ಕಳೆದ ಒಂದು ವರ್ಷದಿಂದ ಬಿಲ್ಲು ಮೊತ್ತವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸಿದ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಅಧಿಕಾರಿಗಳ ನಡೆಗೆ ಸಂಸ್ಥೆಯ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಸರಕಾರದ ನಿಯಮಾವಳಿಗಳ ಪ್ರಕಾರ ಖಾಸಗಿ ವಾಹನಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಪಡೆದ ಮಾಲೀಕರಿಗೆ ಪ್ರತಿ ತಿಂಗಳ ನಂತರ ಅದರ ಮೊತ್ತವನ್ನು ಪಾವತಿಸಲು ನಿಯಮ ಕಡ್ಡಾಯವಾಗಿದೆ, ಆದರೆ ಕೆಲವು ಅಧಿಕಾರಿಗಳು ಇಚ್ಛಾಶಕ್ತಿ ಕೊರತೆಯೋ, ನಿರ್ಲಕ್ಷ್ಯ ವೋ ಗೊತ್ತಿಲ್ಲ ಆದರೆ ಒಂದು ವರ್ಷವಾದರೂ ಮಾಲೀಕರಿಗೆ ಬಾಡಿಗೆ ಮೊತ್ತವನ್ನು ಪಾವತಿಸುವಲ್ಲಿ ವಿಫಲರಾಗಿದ್ದಾರೆ,
ಅದರಂತೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಛೇರಿಗೆ ಸಹನ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಕೆ.ವೀರಣ್ಣ ನವರು 2023 ರಿಂದ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಬಾಡಿಗೆ ನೀಡಿದ್ದು ಆದರೆ ಫೆಬ್ರವರಿ ಒಂದು ತಿಂಗಳ ಬಾಡಿಗೆ ಮೊತ್ತವನ್ನು ಗುತ್ತಿಗೆ ದಾರರಿಗೆ ಪಾವತಿಸದೆ ಮೌನವಹಿಸಿದ್ದರೆ ಇದರಿಂದ ಸಂಸ್ಥೆಯ ಮಾಲೀಕನಿಗೆ ತುಂಬಾ ತೊಂದರೆಯಾಗಿದ್ದು, ಅಧಿಕಾರಿಗಳ ನಡೆಗೆ ಶರಣಾಗಿದ್ದಾರೆ.
ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಲವು ಸರಕಾರಿ ಕಛೇರಿಗಳಿಗೆ ಖಾಸಗಿ ವಾಹನ ಮಾಲೀಕರು ಗುತ್ತಿಗೆ ನೀಡಿದ ನಾಯಕನಹಟ್ಟಿ ಪಟ್ಟಣ ಪಂಚಾಯತಿ, ಚಿತ್ರದುರ್ಗ ಜಿಲ್ಲಾ ಪಂಚಾಯತಿಗೆ ಒಳಪಟ್ಟ ಆರು ತಾಲೂಕುಗಳ ತಾಲ್ಲೂಕು ಪಂಚಾಯತ ಕಛೇರಿ,
ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸರ್ವೆ ಇಲಾಖೆ, ಈಗೇ ಹೊರಗುತ್ತಿಗೆ ಆದಾರದ ಮೇಲೆ ಟೆಂಡರ್ ಪಡೆದ ಮಾಲೀಕರಿಗೆ ಸಮಯಕ್ಕೆ ಸರಿಯಾಗಿ ಬಿಲ್ ಮೊತ್ತವನ್ನು ಪಾವತಿಸಬೇಕು, ಎಂಬುದು ವಾಹನ ಗುತ್ತಿಗೆ ನೀಡಿದ ಮಾಲೀಕರ ಒಕ್ಕೂರಲು ಹಾಗಿದೆ.
ಅಧಿಕಾರಿಗಳ ತಪ್ಪಿಗೆ ಗುತ್ತಿಗೆದಾರರಿಗೆ ಬರೆ :
ಹೌದು ಒಂದು ವರ್ಷದ ಅವಧಿಗೆ ಗುತ್ತಿಗೆ ಪಡೆದ ಸರಕಾರಿ ಇಲಾಖೆಯ ಅಧಿಕಾರಿಗಳ ಒಂದು ತಿಂಗಳು ಕಾರಿನ ಸೇವೆ ನಂತರ ಅದರ ದಾಖಲಾತಿಗಳು ಹಾಗೂ ತಿಂಗಳ ಬಿಲ್ ನ್ನು ಮೇಲಾಧಿಕಾರಿಗಳ ಗಮನಕ್ಕೆ ಕಳಿಸಲಾಗುತ್ತದೆ, ಆದರೆ ಅಧಿಕಾರಿಗಳ ಆ ತಿಂಗಳ ಕೆಲಸ,ಹಾಗೂ ಕಾರ್ಯಭಾರ , ಹಾಗೂ ಇನ್ನಿತರೆ ಕಾರಣಗಳನ್ನು ಹೇಳಿ ಸುಖಾ ಸುಮ್ಮನೆ ಕಾರಿನ ಬಿಲ್ ಮೊತ್ತವನ್ನು ತಡೆಯಿಡಿಯುತ್ತಾರೆ ಆದರೆ ನಿಜವಾಗಿಯೂ ಅಧಿಕಾರಿಗಳಿಂದ ಕೆಲಸವಾಗಿಲ್ಲವಾದರೆ ಅ ಅಧಿಕಾರಿಗಳ ವೇತನ ಹಾಗೂ ಇನ್ನಿತರ ಕ್ರಮ ಕೈಗೊಳಬೇಕು ಆದರೆ ಸುಖಾ ಸುಮ್ಮನೆ ಒಂದು ತಿಂಗಳು ಪೂರ್ತಿ ಕಾರು ಸರಬರಾಜು ಮಾಡಿದ ಗುತ್ತಿಗೆ ದಾರನಿಗೆ ಇದೆಂತಹ ಶಿಕ್ಷೆ, ಮೇಲಾಧಿಕಾರಿಗಳ ಈ ಕ್ರಮಕ್ಕೆ ಗುತ್ತಿಗೆ ದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಳಿಕೆ :
ಈ ಕೂಡಲೇ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಛೇರಿಗೆ ಗುತ್ತಿಗೆ ಆಧಾರದ ಮೇಲೆ ಕಾರು ಸರಬರಾಜು ಮಾಡಿದ ಗುತ್ತಿಗೆ ದಾರರಿಗೆ
ಬಾಕಿ ಬಿಲ್ ಮೊತ್ತವನ್ನು ಪಾವತಿಸಲು ಸೂಚಿಸುವೆ, ಅದರಂತೆ ಜಿಲ್ಲೆಯ ಎಲ್ಲಾ ಸರಕಾರಿ ಕಛೇರಿ ಉಪಯೋಗಕ್ಕೆ ಗುತ್ತಿಗೆ ಪಡೆದ ಎಲ್ಲಾ ಕಛೇರಿ ಅಧಿಕಾರಿಗಳಿಗೆ ಪ್ರತಿ ತಿಂಗಳ ಬಾಡಿಗೆ ಮೊತ್ತವನ್ನು ಪಾವತಿಸಲು ಸೂಚಿಸುವೆ.
—-ಟಿ.ವೆಂಕಟೇಶ್
ಜಿಲ್ಲಾಧಿಕಾರಿಗಳು ಚಿತ್ರದುರ್ಗ
ಹೇಳಿಕೆ :
ಫೆಬ್ರವರಿ 2023ರಿಂದ ಗುತ್ತಿಗೆ ನೀಡಿದ್ದು ಈ ಆಧಾರದ ಮೇಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಉಪಯೋಗಕ್ಕೆ ಕಳೆದ ಒಂದು ವರ್ಷ ಸೇವೆ ನೀಡಿದ್ದೇನೆ ಆದರೆ ಇದುವರೆಗೂ ನನಗೆ ಒಂದು ತಿಂಗಳ ಬಾಡಿಗೆ ಮೊತ್ತವನ್ನು ಪಾವತಿಸದೆ ಪಟ್ಟಣ ಪಂಚಾಯಿತಿಗೆ ಬರುವಂತಹ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ನನ್ನ ಕುಟುಂಬ ನಿರ್ವಹಣೆ ಹಾಗೂ ವಾಹನದ ಇಎಂಐ ಕಟ್ಟಲು ತುಂಬಾ ತೊಂದರೆಯಾಗುತ್ತಿದೆ..
–ಕೆ.ವೀರಣ್ಣ
ಸಹನ ಟೂರ್ಸ ಅಂಡ್ ಟ್ರಾವೆಲ್ಸ್ ಮಾಲೀಕರು ಚಳ್ಳಕೆರೆ

