ಕರ್ನಾಟಕ ರಾಜ್ಯದಲ್ಲಿ ಮೂರು ಜನ ಶಾಸಕರನ್ನು ನೀಡಿದ ಗ್ರಾಮ.
ಕಡಬನಕಟ್ಟೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ : ಟಿ ರಘುಮೂರ್ತಿ.
ನಾಯಕನಹಟ್ಟಿ : ಸಮೀಪದ ತುರುವನೂರು ಹೋಬಳಿಯ ಕಡಬನಕಟ್ಟೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವನ್ನು ಗ್ರಾಮದವರಲ್ಲ ಸೇರಿ ಬಹಳ ಸಡಗರ ಸಂಭ್ರಮ ಅದ್ದೂರಿಯಿಂದ ಜರುಗಿಸಿದ್ದಾರೆ. ಕಡಬನಕಟ್ಟೆ ಚಿತ್ರದುರ್ಗ ತಾಲ್ಲೂಕಿನಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಂತ ಗ್ರಾಮವಿದು. ಈ ದಿನವೇನು ಆಂಜನೇಯ ಸ್ವಾಮಿ ರಥೋತ್ಸವ ಜರುಗಿದೆ, ಸ್ವಾಮಿಯ ಕೃಪೆಯಿಂದ ಈ ಊರಿನವರು ಮೂರು ಜನ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶ ಒಂದು ಹಳ್ಳಿಯಿಂದ ಮೂರು ಜನ ಶಾಸಕರಾಗಿದ್ದೇವೆಂದರೆ ನಮ್ಮೆಲ್ಲ ಊರ ಜನರ ಹಾಗೂ ಸ್ವಾಮಿಯ ಆಶೀರ್ವಾದ ಎಂಬುದು ನಮ್ಮ ಭಾವನೆ. ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಶಿವರಾತ್ರಿ ಆಗಿ 5 ದಿನಗಳ ನಂತರ ನೆರವೇರಿಸಲಾಗುತ್ತದೆ. ನಮ್ಮ ಗ್ರಾಮದಲ್ಲಿ ಎಲ್ಲ ಜಾತಿ ಜನಾಂಗದವರು ಸೇರಿ ಒಟ್ಟು 2500 ಜನಸಂಖ್ಯೆ ಹೊಂದಿರುವ ಗ್ರಾಮವಿದು. ಈ ಗ್ರಾಮದಲ್ಲಿ ಸುಮಾರು 50ರಿಂದ 60 ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿಲ್ಲ ಇದರಲ್ಲೇ ನಾವು ತಿಳಿದುಕೊಳ್ಳಬಹುದು ಎಲ್ಲ ಜಾತಿ ಜನಾಂಗದವರು ಸೌಹಾರ್ದತವಾಗಿ ಇದ್ದಾರೆ ಎಂದು. ಅಂತ ಗ್ರಾಮದಲ್ಲಿ 3 ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕನಾಗಿರುವುದು ನಮ್ಮ ಪುಣ್ಯ. ನಮ್ಮ ಗ್ರಾಮದ ಸಮಸ್ತ ಜನತೆಗೆ ಹಾಗೂ ಜಿಲ್ಲೆ ರಾಜ್ಯ ಮತ್ತು ದೇಶದ ಜನತೆಗೆ ಶ್ರೀ ಆಂಜನೇಯ ಸ್ವಾಮಿಯ ಸದಾ ಇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಸಮಸ್ತ ಕಡಬನಕಟ್ಟೆ ಸಾರ್ವಜನಿಕರು ಇದ್ದರು.

