“ಬಿಲ್ವಪತ್ರೆಯ ಅರ್ಚನೆಗೆ ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಿದೆ”:-ಶ್ರೀಮತಿ ಯಶೋಧಾ ಪ್ರಕಾಶ್

ಚಳ್ಳಕೆರೆ:- ಮಹಾಶಿವರಾತ್ರಿಯಂದು ಶಿವನಿಗೆ ಅರ್ಪಿಸಲಾಗುವ ಬಿಲ್ವಪತ್ರೆಗೆ ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಿದೆ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶಿವರಾತ್ರಿಯ ಮಹಿಮೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಈ ಉಪನ್ಯಾಸಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕವಾಗಿ 108 ಶಿವನಾಮ ಸ್ಮರಣೆ, ಶಿವನ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ಈ ವಿಶೇಷ ಸತ್ಸಂಗದಲ್ಲಿ ಶ್ರೀ ಶಾರದೆ ಶ್ರಮದ ಸದ್ಭಕ್ತರಾದ ಶ್ರೀಮತಿ ಶಾಂತಮ್ಮ,ಮಂಗಳ, ಶಾರದಮ್ಮ
,ವಿಜಯಲಕ್ಷ್ಮಿ, ನಾಗರತ್ನಮ್ಮ, ರಶ್ಮಿ ರಮೇಶ್,ಶೈಲಜ, ಕೃಷ್ಣವೇಣಿ,ವೀರಮ್ಮ, ರಶ್ಮಿ ವಸಂತ, ಸಂಗೀತ, ದ್ರಾಕ್ಷಾಯಣಿ,ಕೆ.ಎಸ್ ವೀಣಾ,ಜಯಶೀಲಮ್ಮ, ಗೀತಾಲಕ್ಷೀ, ಯತೀಶ್ ಎಂ ಸಿದ್ದಾಪುರ,ದೇವರಾಜ್,ಗೌಸೀರ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!