ಚಳ್ಳಕೆರೆ : ಬುಡಕಟ್ಟು ಜನಾಂಗದವರೆ ಹೆಚ್ಚಿರುವಂತಹ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿದ್ದಾರೆ.

ಇನ್ನು ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ಅವರ ಕೆಲಸಗಳನ್ನು ಮಂದಗತಿಯಲ್ಲಿ ಮಾಡುತ್ತ ಭ್ರಷ್ಟಾಚಾರದ ಆರೋಪದಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ಮುಖಂಡ ಕೃಷ್ಣೆಗೌಡ ಗಂಭೀರವಾಗಿ ಆರೋಪಿಸಿದ್ದಾರೆ .

ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ಎಸ್ಸಿ ಎಸ್ಟಿ ಜನಕ್ಕೆ ಸೇರಿದಂತಹ ದರ್ಖಾಸ್ತು ಜಮೀನುಗಳನ್ನು ಪಿಟಿಸಿಎಲ್ ಕಾಯ್ದೆ ಉಲ್ಲಂಘನೆ ಮಾಡಿ ಜಮೀನು ಮಾರಾಟ ಮಾಡುವಂತಹ ಪ್ರಕರಣಗಳು ಜರುಗುತ್ತಿವೆ,. ಇನ್ನು ಸಬ್ ರಿಜಿಸ್ಟರ್ ಮೂಲಕ ಜಮೀನುಗಳನ್ನು ರಿಜಿಸ್ಟರ್ ಮಾಡುವಂತಹ ದಾಖಲೆ ಸಮೇತ ಬಿಡುಗಡೆ ಮಾಡಿದರು.

ಇದೇ ರೀತಿಯಲ್ಲಿ ನಗರದ ಹೃದಯ ಭಾಗದಲ್ಲಿ ಇರುವಂತಹ ರಾಘವೇಂದ್ರ ಮೆಟಲ್ ಸ್ಟೋರ್ , ಹೆಚ್ಚುವರಿಯಾಗಿ ಕಟ್ಟಿದ ಕಟ್ಟಡ ಅಕ್ರಮ ಕಟ್ಟಡವೆಂದು ಅಧಿಕಾರಿಗಳು ದಾಖಲೆ ಸಮೇತ ನೀಡಿದ್ದಾರೆ, ತಾಲೂಕು ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಂತಹ ಈ ಭೂಮಿಯಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಾಣ ಮಾಡಿರುವುದು ಹಾಗೂ ಅದರಲ್ಲಿ ವ್ಯಾಪಾರ ವಹಿವಾಟ ನಡೆಸುವಂತಹ ಮಾಲೀಕರಿಗೆ ಯಾವುದೇ ರೀತಿಯ ನೋಟಿಸ್ ಜಾರಿ ಮಾಡದೆ ಮಳಿಗೆಯನ್ನು ತೆರವು ಮಾಡದೆ ಅಕ್ರಮವಾಗಿ ಕಟ್ಟಡ ಕಟ್ಟಿ ವ್ಯಾಪಾರ ಮಾಡುವಂತಹ ಮಾಲೀಕರಿಗೆ ಅಧಿಕಾರಿಗಳು ಶಾಮಿಲಾಗಿ ಕುಮ್ಮಕ್ಕು ನೀಡುತ್ತಿರುವುದು ಇಂದಿನ ಉದ್ದೇಶವೇನಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ತಿಳಿಸಬೇಕು ಎಂದು ಶಾಸಕರ ಬಗ್ಗೆ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿಕೆಆರ್ ಎಸ್ ಪಕ್ಷದ ಮಹೇಶ್, ಕರ್ನಾಟಕ ರಾಜ್ಯ ಕನ್ನಡ ಸಂಘಟನೆಯ ಕೆ ಮುರಳಿ ಇನ್ನಿತರರು ಹಾಜರಿದ್ದರು.

About The Author

Namma Challakere Local News
error: Content is protected !!