ಚಳ್ಳಕೆರೆ ಸುದ್ದಿ
ಸಾಲುಮರದ ತಿಮ್ಮಕ್ಕ – ಪ್ರಕೃತಿ ಮಾತೆಯ ನಿಜವಾದ ಮಹಿಳೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ, ಸಾಲ ಮರದ ತಿಮ್ಮಕ್ಕ ಸಂಸ್ಕರಣೆಯ ದಿನಾಚರಣೆ ಅಂಗವಾಗಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮ ಒಂದಕ್ಕೆ ಶಾಸಕ ಟಿ ರಘುಮೂರ್ತಿ ಭಾಗಿಯಾಗಿ ಸಾಲುಮರದ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು,
ಕರ್ನಾಟಕದ ಹೆಮ್ಮೆಯ ಪರಿಸರ ಹೋರಾಟಗಾರ್ತಿ, ಪದ್ಮಶ್ರೀ ಪ್ರಶಸ್ತಿ ಸಾಲುಮರದ ತಿಮ್ಮಕ್ಕ ಅವರ ಸೇವೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಬಂಜೆಯೆಂಬ ನೋವನ್ನು ಪ್ರಕೃತಿಯ ಸೇವೆಯಾಗಿ ಪರಿವರ್ತಿಸಿಕೊಂಡ ತಿಮ್ಮಕ್ಕ ಅವರು, ಗಂಡ ಹಳ್ಳಿಕೃಷ್ಣಪ್ಪ ಅವರೊಂದಿಗೆ ಸೇರಿ ಬೆಂಗಳೂರು–ಹುಳಿಯೂರು ರಸ್ತೆ ಬದಿಯಲ್ಲಿ 384ಕ್ಕೂ ಹೆಚ್ಚು ಆಲದ ಮರಗಳನ್ನು ನೆಟ್ಟು ಬೆಳೆಸಿದ್ದಾರೆ.
ಸ್ವಂತ ಮಕ್ಕಳಿಲ್ಲದಿದ್ದರೂ, ಆಲದ ಮರಗಳೇ ತಮ್ಮ ಮಕ್ಕಳು ಎಂದು ಭಾವಿಸಿ, ನೀರು ಹೊತ್ತು, ಬೇಲಿ ಹಾಕಿ, ಕಷ್ಟದ ಜೀವನದಲ್ಲಿಯೂ ಮರಗಳನ್ನು ಉಳಿಸಿದ ಅವರ ಹೋರಾಟ ಇಂದಿಗೂ ಜನರಿಗೆ ಪ್ರೇರಣೆ ನೀಡುತ್ತಿದೆ. ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿರುವ ಅವರಿಗೆ ಪದ್ಮಶ್ರೀ, ನಾಡೋಜ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ನೂರಕ್ಕೂ ಅಧಿಕ ವಯಸ್ಸಿನಲ್ಲಿಯೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಾಲುಮರದ ತಿಮ್ಮಕ್ಕ, ಇಂದಿನ ಯುವಪೀಳಿಗೆಗೆ ಹಸಿರು ಬದುಕಿನ ಮಹತ್ವವನ್ನು ಸಾರುತ್ತಿರುವ ಜೀವಂತ ಪ್ರತೀಕವಾಗಿದ್ದಾರೆ. ಇಂಚವರ ಆದರ್ಶಗಳನ್ನು ಹಿಂದಿನ ಯುವ ಪೀಳಿಗೆ ಪಾಲಿಸಬೇಕಾಗುತ್ತದೆ ಅಲ್ಲದೆ ಕರ್ನಾಟಕ ಮಹಾ ಒಕ್ಕೂಟದ ಪತ್ರಕರ್ತರು ಕಷ್ಟಗಳು ಹಾಗೂ ಪತ್ರಕರ್ತರಿಗೆ ಸೂರ್ ನೀಡುವಂತಹ ಕೆಲಸವನ್ನು ನಾನೊಬ್ಬ ಶಾಸಕನಾಗಿ ಮುಂದಿನ ದಿನಗಳಲ್ಲಿ ಮಾಡಿಸಿಕೊಡುತ್ತೇನೆ ಎಂದು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಸೂರ್ಯ ಅಗ್ನಿ ಹಾಗೂ ಮಲ್ಲಿಕಾರ್ಜುನ ಬಂಗ್ಲೆ ಪತ್ರಕರ್ತರು ಮಾತನಾಡಿದರು,
ಇನ್ನು ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜಿಸಿದ ಹಿರಿಯ ಪತ್ರಕರ್ತರಾದ ಶಿವಕುಮಾರ್ ಚಕ್ರವರ್ತಿ ಹಾಗೂ ಹೊಸದಿಗಂತ ಪತ್ರಿಕೆಯ ರಿಪೋರ್ಟರ್ ಈಶ್ವರಪ್ಪ, ತಾಲೂಕು ಅಧ್ಯಕ್ಷರಾದ ಬಶೀರ್ ಹಯಾತ್ ರೈತ ಸಂಘದ ಮುಖಂಡ ಕೆಪಿ ಬೂತಯ್ಯ ರೆಡ್ಡಿಹಳ್ಳಿ ವೀರಣ್ಣ ವಿಜಯಕುಮಾರ್ ಶ್ರೀನಿವಾಸ ಸೇರಿದಂತೆ ಆನೇಕರು ಭಾಗಿಯಾಗಿದ್ದರು
ಈ ವೇಳೆ ಹಲವಾರು ರಂಗದಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಯಿತು,

