ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ.
ನಾಯಕನಹಟ್ಟಿ: ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ.ಎಂ ಮೈಲಾರಸ್ವಾಮಿರವರ ಜನ್ಮ ದಿನಾಚರಣೆಯನ್ನು ಮಂಗಳವಾರ ಪಟ್ಟಣದ ಮಯೂರ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡರು.
ಶಾಲೆಯ ವಿದ್ಯಾರ್ಥಿಗಳು ಮೈಲಾರಸ್ವಾಮಿ ರವರನ್ನ ಪುಷ್ಪಮಾಲೆ, ಹೂವುಗುಚ್ಛ ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಕೇಕ್ ಕತ್ತರಿಸಿ ಮಕ್ಕಳಿಗೆಲ್ಲ ಸಿಹಿ ಹಂಚಿ ಮಕ್ಕಳು ಹಾಗೂ ಶಿಕ್ಷಕರು , ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಡಾ.ಮೈಲಾರಸ್ವಾಮಿ ಆಪ್ತರಾದ ಶ್ರೀನಿವಾಸಲು ,ವಿನೋದ್, ಮಾರ್ಕ್ ಆಂಥೋನಿ, ಇಂತಿಯಾಜ್ , ಮಣಿ, ಮುಖ್ಯೋಪಾಧ್ಯಾಯ ಟಿ ಮಹಾಂತೇಶ್ ಸೇರಿದಂತೆ ಶಾಲೆಯ ಶಿಕ್ಷಕ -ಶಿಕ್ಷಕಿಯರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.

