ನಮಸ್ತೆ ಸರ್.
ಮಾನ್ಯ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ನಿರ್ದೆಶನದಂತೆ, ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ, ಹಿರಿಯೂರು ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ಇವರ ಮಾರ್ಗದರ್ಶನದಲ್ಲಿ. ದಿನಾಂಕ-28/01/2025 ರಂದು ಮಧ್ಯಾಹ್ನ- 1:00 ಗಂಟೆ ಸಮಯದಲ್ಲಿ ಅಬಕಾರಿ ಉಪ ನಿರೀಕ್ಷಕರು-1 ಚಳ್ಳಕೆರೆ ವಲಯ ಆದ ನಾನು ಸಿಬ್ಬಂದಿಯೊಂದಿಗೆ ಚಳ್ಳಕೆರೆ ತಾಲ್ಲೂಕಿನ ಆಂದ್ರ ಗಡಿಭಾಗದಲ್ಲಿರುವ ಆಂದ್ರದ ತಾಳಿಕೆರೆ(ಕೆ.ಪಿ.ಕುಂಟೆ) ಗ್ರಾಮದಿಂದ ಮಲ್ಲಸಮುದ್ರ ಗ್ರಾಮಕ್ಕೆ ಬರುವ ರಸ್ತೆಯಲ್ಲಿ 1) ಟಿ. ಸ್ವಾಮಿ ಅಲಿಯಾಸ್ ದೊಮ್ಮ, 2)ನಾಗರಾಜ್ ನಾಯಕನಹಟ್ಟಿ ಪಟ್ಟಣ ಇವರು ಹೀರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ- ಕೆ.ಎ-16 ಇ.ಎನ್ -5584 ಆಗಿದ್ದು ವಾಹನದಲ್ಲಿ ಇಬ್ಬರು 21 ಪಾಸ್ಟಿಕ್ ಬಾಟಲಿಗಳಲ್ಲಿ 21 ಲೀಟರ್ ಅಕ್ರಮ ಸೇಂದಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರಿಂದ ಸದರಿ ಆರೋಪಿತರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ-1965 ರ ಕಲಂ- 10, 11,ರ ಉಲ್ಲಂಘನೆ ಕಂಡು ಬಂದಿದ್ದರಿಂದ ಇದೇ ಸಮ ಕಾಯ್ದೆಯ ಕಲಂ-32(1), 34, 38(ಎ), ಹಾಗೂ 43(ಎ) ರ ರೀತ್ಯಾ ಘೋರ ಪ್ರಕರಣವನ್ನು ದಾಖಲಿಸಲಾಗಿರುತ್ತದೆ ಸದರಿ ಆರೋಪಿಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಕಲಂ 35 (3) ರ ರೀತ್ಯಾ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಜಪ್ತುಪಡಿಸಿಕೊಂಡ ಸದರಿ ಮುದ್ದೆ ಮಾಡಿಟ್ಟು ಮೌಲ್ಯ-51000 ರೂಪಾಯಿಗಳು ಆಗಿರುತ್ತದೆ.
ಸದರಿ ಕಾರ್ಯಚಣೆಯಲ್ಲಿ ನಾಗರಾಜು.ಸಿ ಅಬಕಾರಿ ನಿರೀಕ್ಷಕರು, ಟಿ ರಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು-1, ಡಿಟಿ ತಿಪ್ಪಯ್ಯ ಅಬಕಾರಿ ಉಪ ನಿರೀಕ್ಷಕರು -2, ಚಳ್ಳಕೆರೆ ವಲಯ ಹಾಗೂ ಮುಖ್ಯ ಪೇದೆಗಳಾದ ನಾಗರಾಜ.ಎನ್, ಟಿ. ಸೋಮಶೇಖರ, ಮಂಜುಳಮ್ಮ ಬಿ, ದರ್ಶನ್ ಕುಮಾರ್ ಸಿ, ಮತ್ತು ವಾಹನ ಚಾಲಕರಾದ ನವನೀತ್ ಮತ್ತು ಗೃಹರಕ್ಷಕರು ಭಾಗವಹಿಸಿದ್ದರು.

