ಚಳ್ಳಕೆರೆ :
ಚಳ್ಳಕೆರೆ: ಸುಂಕ ವಸೂಲಿ ವಿರೋಧಿಸಿ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುವ ಮುನ್ನವೇ ಟೋಲ್
ಗಳನ್ನು ನಿರ್ಮಿಸಿ, ಸುಂಕ ವಸೂಲಿ ಮಾಡುವುದು ಕಾನೂನಿಗೆ
ವಿರುದ್ಧವಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ
ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಆರೋಪಿಸಿದರು.
ಚಳ್ಳಕೆರೆ ಹಿರೇಹಳ್ಳಿ ಗ್ರಾಮದ ಬಳಿಯಿರುವ ಎನ್ ಹೆಚ್ 150ರ
ಟೋಲ್ ಬಳಿ ಇಂದು ಪ್ರತಿಭಟನೆ ನಡೆಸಿ ಮಾತಾಡಿ, ಬಳ್ಳಾರಿಯಿಂದ
ಹಿರಿಯೂರಿಗೆ ಹೋಗಲು ಎನ್ ಹೆಚ್ ಪ್ರಾಧಿಕಾರ ನೂತನ ಷಟ್ಟತ
ರಸ್ತೆ ನಿರ್ಮಿಸಿದೆ. ಆದರೆ ಕಾಮಗಾರಿ ಮುಗಿದಿಲ್ಲ. ಸುಂಕ ವಸೂಲಿ
ಮಾಡುತ್ತಿದ್ದಾರೆಂದರು.

