ಪೋಲೀಸ್ ಸಿಬ್ಬಂದಿಗಳು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಸಿಬ್ಬಂದಿಗಳು ಸಹ ಯಾರಾದರೂ ಹೆಲ್ಮೆಟ್ ಧರಿಸದೆ ದ್ವೀಚಕ್ರವಾಹನದಲ್ಲಿ ಸಂಚರಿಸುವ ದಂಡ ವಿಧಿಸಬೇಕು ಎಂದು ಡಿವೈಎಸ್ಪಿ ಟಿ.ಬಿ.ರಾಜಣ್ಣ ಹೇಳಿದರು.

ಪೊಲೀಸ್ ಇಲಾಖೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸ ಜಾಗೃತಿ ಜಾಥ ಹಾಗೂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಸುರಕ್ಷತೆ ನೇಮಗಳನ್ನು ಪಾಲಿಸದೆ ಎಷ್ಟೋ ಸವಾರರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ತಮ್ಮನ್ನು ನಂಬಿಕೊಂಡ ಕುಟುಂಬದವರ ಭವಿಷ್ಯ ಯಾರು ಯೋಚನೆ ಮಾಡುವುದಿಲ್ಲ ಅಪಘಾತವಾದಾಗ ಮೃತಪಟ್ಟಾಗ ಮಾತ್ರ ಅಂತಹ ಕುಟುಂಬಗಳ ಗೋಳು ಹೇಳುತ್ತಿರದಾಗುತ್ತದೆ. ವಾಹನ ಸವಾಲರು ಪ್ರತಿಯೊಬ್ಬರು ತಪ್ಪದೆ ಹೆಲ್ಮೆಟ್ ಧರಿಸಬೇಕು. ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಮೊಬೈಲ್ ಮಾತನಾಡುತ್ತಾ ವಾಹನ ಚಲಾಯಿಸಬಾರದು. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ರಸ್ತೆ ಜಾಗೃತಿ ಕುರಿತು ಮಾಹಿತಿ ನೀಡಬೇಕು. ಹಾಗೂ 18 ವರ್ಷ ತುಂಬಿದ ಮೇಲೆ ವಾಹನವನ್ನು ಚಲಾಯಿಸಿಬೇಕು, ವಾಹನದ ದಾಖಲಾತಿಗಳು ನೋಂದಣಿ ಮಾಡಿಸಿಕೊಳ್ಳಬೇಕು. ಭಾರತದಲ್ಲಿ ರಸ್ತೆ ಅಪಘಾತದಲ್ಲಿ 2024ನೇ ಸಾಲಿನಲ್ಲಿ ಒಟ್ಟು ಒಂದು 1.68 ಲಕ್ಷ ಜನರು ಮೃತಪಟ್ಟಿದ್ದು ಅದರಲ್ಲಿ ಹೆಲ್ಮೆಟ್ ಧರಿಸದೆ ಕಾರಣಕ್ಕೆ ರೂ.30,000 ಜನರು ಮೃತಪಟ್ಟಿರುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 353.900 ಕಿಲೋಮೀಟರ್ ನಷ್ಟು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ಚಿತ್ರದುರ್ಗ ಜಿಲ್ಲೆಯ ಜನತಾ ಇಲ್ಲಿಯವರೆಗೆ 5.3788 ರಷ್ಟು ಮಾದರಿಯ ವಾಹನಗಳು ನೋಂದಣಿಯಾಗಿದ್ದು ಇದರಲ್ಲಿ ಮೋಟರ್ ಸೈಕಲ್ 54.97℅ (_2,95.654) ಹಾಗೂ 6.17%(33,207) ರಷ್ಟು ಕಾರ್ಯಗಳು ಸಂಚಾರ ಮಾಡಿವೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಚತುರ್ಗ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು
2022 .ನೇ ಸಾಲಿನಲ್ಲಿ ಒಟ್ಟು 1717 ರಸ್ತೆ ಅಪಘಾತಗಳಾಗಿದ್ದು 477 ಮೃತ ಪಟ್ಟಿದ್ದಾರೆ. 2509.ಗಾಯಗೊಂಡಿದ್ದಾರೆ.
2024 ನೇ ಸಾಲಿನಲ್ಲಿ1740 ಅಪಘಾತಗಳಾಗಿದ್ದು ಸುಮಾರು 488 ಜನ ಮೃತಪಟ್ಟಿದ್ದಾರೆ .2020 ಜನ ಗಾಯಗೊಂಡಿದ್ದಾರೆ.
2024 ನೇ ಸಾಲಿನಲ್ಲಿ 1562 ಅಪಘಾತಗಳಾಗಿದ್ದು ಸುಮಾರು 416 ಜನರು ಮೃತಪಟ್ಟಿದ್ದಾರೆ. ಸುಮಾರು 2044 ಜನರು ಗಾಯಗೊಂಡಿದ್ದಾರೆ. ಇದರಿಂದಾಗಿ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು… ಪೋಲಿಸ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ ಮಾತನಾಡಿ ಅಪಘಾತಗಳಿಂದ ದೇಶದ ಆರ್ಥಿಕತೆ ಕುಸಿಯುತ್ತಿದೆ. ಅಪಘಾತವಾದ 30 ವ್ಯಕ್ತಿಯ ಜೀವನ ಉಳಿಸಬಹುದು ಇದನ್ನ ಬಂಗಾರದ ಸಮಯ ಎಂದು ಕರೆಯುತ್ತಾರೆ. ಅಪಘಾತಗಳು ಸಂಭವಿಸಿದಾಗ ತಕ್ಷಣವೇ ಯಾವುದಾದರೂ ವಾಹನವನ್ನು ನೋಡಿ ಗಾಯಳುಗಳನ್ನ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರು ನಮ್ಮ ಜೀವ ಉಳಿಸಿಕೊಳ್ಳಲು ರಸ್ತೆ ಸುರಕ್ಷತಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ರಾತ್ರಿ ಸಮಯದಲ್ಲಿ ಅತಿ ಹೆಚ್ಚು ಅಪಘಾತಗಳವಾಗುತ್ತಿದ್ದು ಇದಕ್ಕೆ ಚಾಲಕನ ನಿದ್ರೆ ಮೊಂಪರು ಚಾಲಕ ಒತ್ತಡದಲ್ಲಿ ವಾಹನ ಚಾಲನೆ ಮಾಡುವುದು. ವಾಹನದ ಬೆಳಕು ಸರಿಯಾಗೆ ಕಾಣದೆ ಇರುವುದು, ಕಾರಣದಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಇಲಾಖೆಯಿಂದ ಸಾಕಷ್ಟು ರಸ್ತೆ ಸುರಕ್ಷತೆ ಮತ್ತು ಜಾಗೃತೆ ಬಗ್ಗೆ ಮಾಹಿತಿ ನೀಡುತ್ತಿದೆ ಅದನ್ನ ಪಾಲಿಸದೆ ಇರುವುದು ಕಾರಣದಿಂದಾಗಿ ಅಪಘಾತಗಳು ಹೆಚ್ಚುತ್ತಿವೆ ಪ್ರತಿಯೊಬ್ಬರು ವಾಹನ ಸವಾರರು ರಸ್ತೆ ಫಲಕಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮಗಳನ್ನು ಪಾಲಿಸಿ ವಾಹನ ಚಲಿಸಿದರೆ ಯಾವುದೇ ಅಪಘಾತಗಳು ಹಾಗುವುದಿಲ್ಲ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ವೇಣಿ, ಶಿಕ್ಷಕರದ ಬಿ ರಾಜಕುಮಾರ್ ಪ್ರದೀಪ್, ಪ್ರಾಣೇಶ್ ಸುಜಾತ, ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್, ದೊರಪ್ಪ ಬಾಲಪ್ಪ ದೊಡ್ಮನಿ, ಮಹಿಳಾ ಮುಖ್ಯಪೇದೆ ಗಂಗಮ್ಮ,ಎಎಸ್ ಐ ಗೋವಿಂದರಾಜ್,ಪರಶುರಾಮ್ ಕೊಂಡಜಿ
ಸಂತೋಷ,ಶ್ರೀನಿವಾಸ್.ತಿಲಕರಾಜ್,ಶಂಕರ್ ಬಸವರಾಜ್ ಜಗ್ಗದೀಶ ಮಹೇಶಬಾಬು ಕವಿತ,ಗಿರಿಯಮ್ಮ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಿರಿಯಮ್ಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇದ್ದರು…

About The Author

Namma Challakere Local News
error: Content is protected !!