ಚಿತ್ರದುರ್ಗ: ವರಲಕ್ಷ್ಮಿಗೆ ಹಸಿರು ಪುರಸ್ಕಾರ ಪ್ರಶಸ್ತಿ
ಪ್ರದಾನ
ಚಿತ್ರದುರ್ಗ ನಗರದ ಲಿಡ್ಕರ್ ಭವನದಲ್ಲಿ ನುಲೆನೂರು ಶಂಕ್ರಪ್ಪ
ಪ್ರತಿಷ್ಠಾನದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮಹಿಳಾ
ಹೋರಾಟಗಾರ್ತಿ ವರಲಕ್ಷ್ಮಿ ಅವರಿಗೆ ನುಲೆನೂರು ಶಂಕ್ರಪ್ಪ
ಹಸಿರು ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮಹಿಳೆಯರು ವರಲಕ್ಷ್ಮಿ ಅವರಿಗೆ
ಹೂವಿನಮಳೆಗರೆದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೀರಾವರಿ
ಹೋರಾಟಗಾರರಾದ ಬಿ ಎ ಲಿಂಗಾರೆಡ್ಡಿ, ಕಮಲಮ್ಮ, ರೈತ
ಮುಖಂಡ ಕೆಪಿ ಭೂತಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!