ಚಿತ್ರದುರ್ಗ: ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ
ಚಿತ್ರದುರ್ಗದ ಐತಿಹಾಸಿಕ ಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ
ಇಸ್ಪೀಟ್, ಗಾಂಜಾ ಸೇರಿದಂತೆ ಅಕ್ರಮ ದಂಧೆಗಳು ಹೆಚ್ಚಾಗುತ್ತಿದ್ದು,
ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರುನಾಡ
ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
ನಡೆಸಲಾಯಿತು. ಕೋಟೆಗೆ ರಕ್ಷಣೆ ಇಲ್ಲದಂತಾಗಿದೆ ಎಂದು
ಆರೋಪಿಸಿದ ಸೇನೆಯು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ರಕ್ಷಣೆ
ಒದಗಿಸಬೇಕು ಹಾಗೂ ಒತ್ತುವರಿ ತೆರವುಗೊಳಿಸಬೇಕು ಎಂದು
ಆಗ್ರಹಿಸಿದೆ.

