ಚಳ್ಳಕೆರೆ :
ಮೊಳಕಾಲ್ಕೂರು: ರಾತ್ರಿ ವೇಳೆ ವಿದ್ಯುತ್ ನೀಡುವಂತೆ
ಪ್ರತಿಭಟನೆ
ರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕೆಂದು
ಆಗ್ರಹಿಸಿ, ಮೊಳಕಾಲ್ಮುರು ಕ್ಷೇತ್ರದ ಬಂಡೆ ತಿಮ್ಮಲಾಪುರ ಹಾಗೂ
ಸುತ್ತಮುತ್ತಲ ಗ್ರಾಮಸ್ಥರು, ರೈತರು ಗೌರಸಮುದ್ರದ ವಿದ್ಯುತ್
ವಿತರಣಾ ಕೇಂದ್ರದ ಎದುರು ಇಂದು ಪ್ರತಿಭಟನೆ ನಡೆಸಿದರು.
ಗ್ರಾಮದ ಸುತ್ತಲೂ 150ಕ್ಕೂ ಹೆಚ್ಚು ತೋಟದ ಮನೆಗಳಿವೆ,
ಅವುಗಳಿಗೆ ತ್ರಿಫೇಸ್ ವಿದ್ಯುತ್ ನೀಡಿದಾಗ ಮಾತ್ರ ಮನೆಗಳಲ್ಲಿ
ಬೆಳಕಿರುತ್ತದೆ.
ಇದರಿಂದ ರಾತ್ರಿ ವೇಳೆ ಕತ್ತಲಿನಲ್ಲಿ ಕಾಲ
ಕಳೆಯಬೇಕಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

