ಪ್ರಗತಿಪರ ರೈತ ದಯಾನಂದಮೂರ್ತಿಗೆ
ರಾಷ್ಟ್ರಮಟ್ಟದ ಕಲಾವಿಭೂಷಣ ಪ್ರಶಸ್ತಿ
ಚಳ್ಳಕೆರೆ: ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ
ರಾಷ್ಟ್ರಮಟ್ಟದ ಕಲಾವಿಭೂಷಣ ಪ್ರಶಸ್ತಿಯನ್ನು ಪ್ರತಿವರ್ಷ
ನೀಡುತ್ತಿದ್ದು, ಪ್ರಸ್ತುತ ವರ್ಷದ ಪ್ರಶಸ್ತಿಯನ್ನು ತಾಲ್ಲೂಕಿನ
ದೇವರಮರಿಕುಂಟೆ ಕಾವಲು ಪ್ರದೇಶದ ಪ್ರಗತಿಪರ ರೈತ
ಡಾ.ಆರ್. ಎ.ದಯಾನಂದಮೂರ್ತಿಗೆ ನೀಡಿ ಗೌರವಿಸಿದೆ.
ವೇದಿಕೆಯ ಅಧ್ಯಕ್ಷ ಎಲ್.ಎಚ್.ಪಂಡಾರಿ ಈ ಬಗ್ಗೆ ಮಾಹಿತಿ
ನೀಡಿ, ವೇದಿಕೆಯಿಂದ ಪ್ರತಿವರ್ಷ ಸಾಹಿತ್ಯ, ಭಾಷೆ,
ನೆಲಜಲ, ಸಂಸ್ಕೃತಿ, ಸಮಾಜಸೇವೆ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು
ಆಯ್ಕೆ ಮಾಡಿ ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿ ನೀಡಲಾಗುತ್ತದೆ. ಈ
ಹಿನ್ನೆಲೆಯಲ್ಲಿ ಚಳ್ಳಕೆರೆಯ ಆರ್. ಎ.ದಯಾನಂದಮೂರ್ತಿ ಸಾಧನೆ ಗೌರವಿಸಿ
ಅವರಿಗೆ ಪ್ರತಿಷ್ಠಿತ ಕಲಾವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದಿದ್ದಾರೆ.

