ಚಳ್ಳಕೆರೆ :
ಚಿತ್ರದುರ್ಗ: ಒಳಮೀಸಲಾತಿಗೆ ಆಗ್ರಹಿಸಿ ದಲಿತ
ಸಂಘಟನೆಗಳ ಪ್ರತಿಭಟನೆ
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕೂಡಲೇ
ಒಳಮೀಸಲಾತಿ ಜಾರಿಗೊಳಿಸಲು ಮಾದಿಗ ಸಮುದಾಯಗಳ
ಸ್ವಾಭಿಮಾನಿ ಒಕ್ಕೂಟದ ಸದಸ್ಯರಿಂದು ಡಿಸಿ ಕಚೇರಿ ಬಳಿ
ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಡಿಸಿ
ಕಚೇರಿ ವರೆಗೂ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರ ಒಳ
ಮೀಸಲಾತಿ ಜಾರಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿದೆ
ಎಂದು ಆರೋಪಿಸಿ ಘೋಷಣೆ ಕೂಗಿದರು.
ಆಡಳಿತ ನಡೆಸಿದ
ಎಲ್ಲಾ ಸರ್ಕಾರಗಳು ಮಾದಿಗ ಸಮುದಾಯಕ್ಕೆ ವಂಚನೆ ಮಾಡಿವೆ
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

