ಚಳ್ಳಕೆರೆ :
ಚಳ್ಳಕೆರೆ: ಸಮಸ್ಯೆಗಳನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು
ಹೋಗಬೇಡಿ
ಗ್ರಾಮದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮೇಲ್ಮಟ್ಟದ ಅಧಿಕಾರಿಗಳ
ಬಳಿ ತೆಗೆದುಕೊಂಡ ಹೋಗದೆ, ತಳ ಮಟ್ಟದಲ್ಲಿಯೇ
ಬಗೆಹರಿಸಿಕೊಂಡಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ
ಎಂದು ಚಳ್ಳಕೆರೆ ತಾಪಂ ಇಓ ಶಶಿಧರ್ ಅಭಿಪ್ರಾಯ ಪಟ್ಟರು.
ಚಳ್ಳಕೆರೆಯಲ್ಲಿಂದು ಆಯೋಜಿಸಿದ್ದ ಆದಿಕರ್ಮಯೋಗಿ
ಬ್ಲಾಕ್ ಮಟ್ಟದ ಕಾರ್ಯಕ್ರಮದಲ್ಲಿ ಮಾತಾಡಿ, ಗ್ರಾಮೀಣ
ಭಾಗಗಳ ಸಮಸ್ಯೆಗಳಿಗೆ ಬೇರೆ ಕಡೆ ಬೆರಳು ತೋರಿಸದೆ ತಾವೇ
ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಜನಸಾಮಾನ್ಯರು ಕೆಲಸ
ಮಾಡಬೇಕೆಂದರು.

