ನಾಯಕನಹಟ್ಟಿ ಪಟ್ಟಣದಲ್ಲಿ ಹಗಲು ವೇಷ ಕಲೆ ಪ್ರದರ್ಶನ.
ನಾಯಕನಹಟ್ಟಿ:: ರಾಮಾಯಣದ ಮಹತ್ವ ಸಾರುವ ಹಗಲುವೇಷ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎಂದು ಹರಪನಹಳ್ಳಿಯ ಹಗಲು ವೇಷ ಕಲೆಗಾರ ಬಸವರಾಜ್ ಹೇಳಿದರು.
ಶುಕ್ರವಾರ ನಾಯಕನಹಟ್ಟಿ ಪಟ್ಟಣದಲ್ಲಿ ಹಗಲುವೇಷ ಹಾಕಿಕೊಂಡು ಪಟ್ಟಣದ ಪ್ರತಿ ಮನೆ ಮನೆಗೆ ಸಂಚಾರ ಮಾಡಿ ನಂತರ ಮಾಧ್ಯಮದೊಂದಿಗೆ ಮಾತನಾಡಿದವರು ಪೂರ್ವಜರ ಕಾಲದಿಂದಲೂ ವಂಶ ಪರಂಪರೆಯಾಗಿ ಹಗಲು ವೇಷ ಕಲೆಯನ್ನು ಉಳಿಸಿಕೊಂಡು ಬಂದಿದ್ದೇವೆ ಆಧುನಿಕ ಯುವ ಜನತೆಗೆ ಮಹಾ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಪ್ರತಾಪ್ ಪ್ರಸಂಗವನ್ನು ತಿಳಿಸದೆ ಇದ್ದದ್ದರಿಂದ ದೇಶದಲ್ಲಿ ಅವ್ಯವಹಾರಗಳು ಕಾಣುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಆಂಜನೇಯ ಪಾತ್ರಧಾರಿ ನಾಗರಾಜ್ ಇದ್ದರು.

