ಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ಯೋಜನೆ ಪ್ರತಿ ಮನೆಗೆ ಕುಡಿಯುವ ನೀರು ಸೌಲಭ್ಯ ಹೊದಗಿಸುವ ಉದ್ದೇಶದಿಂದ ಪ್ರತಿ ಮನೆ ಮನೆಗೆ ನಳ ಸಂಪರ್ಕಿ ನೀಡಲಾಗುತ್ತದೆ
ಆದರೆ ಕೆಲ ಗ್ರಾಮದಲ್ಲಿ ಜಲ ಜೀವನ ಮಿಷನ್ ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹಬ್ಬಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿ ಕಾಮಗಾರಿ ಗುಣಮಟ್ಟ ಪರೀಶಿಲನೆಗೆ ಅಧಿಕಾರಿಗಳ ತಂಡ ರಚಿಸಿ ವರದಿ ನೀಡಲು ಸೂಚಿಸಿತ್ತು.
ಅದರಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಶೇ.30 ರಷ್ಟು, ಸುಮಾರು 30 ಗ್ರಾಮಗಳಲ್ಲಿ ಕಾಮಗಾರಿ ಪರೀಶಿಲನೆ ನಡೆಸಲು ಸೂಚಿಸಿದ ಹಿನ್ನೆಲೆಯಲ್ಲಿ ಸ್ಥಳ ಪರೀಶಿಲನೆಗೆ ತಹಶಿಲ್ದಾರ್ ರೇಹಾನ್ ಪಾಷ ಬೇಟಿ ನೀಡಿದ್ದಾರೆ.
ತಾಲೂಕಿನ ನರಹರಿನಗರ, ಕೆರೆಹಿಂದಲಹಟ್ಟಿ, ಗೊರ್ಲಕಟ್ಟೆ, ನಂದನಹಳ್ಳಿ , ಉಪ್ಪಾರಟ್ಟಿ, ಅಡವಿ ಚಿಕ್ಕನಹಳ್ಳಿ, ಮಿರಸಾಬಿಹಳ್ಳಿ, ದೊಡ್ಡಿರಿ ಗ್ರಾಮಗಳ ಹೀಗೆ ಸುಮಾರು ಎಂಟು ಗ್ರಾಮಗಳಿಗೆ ತಹಶೀಲ್ದಾರ್ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದಾರೆ.
ಇನ್ನು ಕಾಮಗಾರಿ ಸ್ಥಳ ಪರಿಶೀಲನೆ ವೇಳೆಯಲ್ಲಿ ಸಾರ್ವಜನಿಕರು ಹಾಗೂ ಮನೆಯ ಸದಸ್ಯರುಗಳು ಆರೋಪಿಸಿ ಕಾಮಗಾರಿ ಪ್ರಾರಂಭವಾದಗಿನಿಂದ ನಳದಲ್ಲಿ ನೀರು ಬರುತ್ತಿಲ್ಲ, ಕಾಮಗಾರಿ ವೇಳೆ ಹಗೆದ ಸಿಸಿ ರಸ್ತೆ ಹಳಾಗಿದೆ, ಮರು ರಸ್ತೆ ನಿರ್ಮಿಸಿಲ್ಲ, ಈ ಭಾಗದಲ್ಲಿ ಕುಡಿಯಲು ನೀರು ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ಕುಡಿಯುವ ನೀರು ಯೋಜನೆಗಾಗಿ ಜಲಜೀವನ್ ಮಿಷನ್ ಯೋಜನೆ ಅತ್ಯಗತ್ಯವಾಗಿ ಗ್ರಾಮೀಣ ಭಾಗದ ಜನರಿಗೆ ವರದಾನ, ಪ್ರತಿ ಮನೆ ಮನೆಗೂ ನಲ್ಲಿ ಕಲೆಕ್ಷನ್ ನೀಡುವ ಮೂಲಕ ಕುಡಿಯುವ ನೀರು ಸೌಲಭ್ಯ ಹೊದಗಿಸುವುದು ಆದ್ಯ ಕರ್ತವ್ಯವಾಗಿದೆ ಎನ್ನಲಾಗಿದೆ.

