ಮಲೇಬೋರನಹಟ್ಟಿ ಗ್ರಾಮದಲ್ಲಿ ಜರುಗಿದ 6ನೇ ವರ್ಷದ ದಿಂಡಿ ಉತ್ಸವ ಸಂಭ್ರಮ.

ನಾಯಕನಹಟ್ಟಿ: ಸಮೀಪದ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಲ್ಲೇದೋರನಹಟ್ಟಿ 6ನೇ ವರ್ಷದ ಶ್ರೀ ಪಾಂಡುರಂಗ ರುಕ್ಕಣಿ ದೇವರ ದಿಂಡಿ ಉತ್ಸವ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು.

ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಸಂತ ಮಂಡಳಿಯ ಯುವಕರು ಪಾಂಡುರಂಗಸ್ವಾಮಿ ಭಕ್ತರು ಹಾಗೂ ಸದ್ಭಕ್ತರು ಇವರಿಂದ ಶ್ರೀ ಪಾಂಡುರಂಗ ರುಕ್ಕಿಣಿ ದೇವರ 6ನೇ ವರ್ಷದ ದಿಂಡಿ ಉತ್ಸವವನ್ನು ಸಂಭ್ರಮ ಸಡಗರದಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ಶನಿವಾರ ಸಂಜೆ 5:00ಗೆ ಸಮೀಪದ ಜಿನಿಗಿ ಹಳ್ಳದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.

ಅಲ್ಲಿಂದ ಮಹಿಳೆಯರು ಕುಂಭಮೇಳದೊಂದಿಗೆ ವಿವಿಧ ಭಜನಾ ತಂಡಗಳೊಂದಿಗೆ ಶ್ರೀ ಪಾಂಡುರಂಗ ರುಕ್ಕಿಣಿ ದೇವಿಯ ನಾಮ ಸ್ಮರಣೆ ಮಾಡುತ್ತಾ ಭಕ್ತರು
ಅದ್ದೂರಿಯಾಗಿ ಗ್ರಾಮಕ್ಕೆ ಪ್ರವೇಶಿಸಿದರು.

ನಂತರ ಗ್ರಾಮದ ಶ್ರೀ ಮಾರಿಕಾಂಬ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಶ್ರೀ ಪಾಂಡುರಂಗ ಸ್ವಾಮಿ ರುಕ್ಮಿಣಿ ಮೂರ್ತಿಗಳಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜೆ ಕಾಕಡಾರತಿ ನೆರವೇರಿಸಿ ನಂತರ ಪ್ರವಚನ ಕಾರ್ಯಕ್ರಮ ನಡೆಯಿತು ತದನಂತರ ನೆರೆದಿದ್ದ ಭಕ್ತರಿಗೆ ದಾಸೋಹ, ಭಜನೆ, ಕೀಲು ಕುದುರೆ ನೃತ್ಯ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.

ಇದೇ ವೇಳೆಯಲ್ಲಿ ಗ್ರಾಮಸ್ಥರು ಮತ್ತು ಸಂತ ಮಂಡಳಿಯ ಯುವಕರಾದ ಮಲೇಬೋರನಹಟ್ಟಿ ಗಿಡ್ಡಬೋರಯ್ಯ, ಡ್ರೈವರ್ ಸೂರಯ್ಯ, ಎಸ್ ಪಾಲಯ್ಯ,ಮಾಳಿಗೆರು ಚನ್ನಪ್ಪ, ಬುಲೆಟ್ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಸುರೇಶ್,ಬಸವರಾಜ್ ಓಕುಂಡಯ್ಯ, ಎಂ. ಆರ್. ಬೋರಣ್ಣ, ಪಲ್ಲಿ ಓಬಯ್ಯ, ಪೂಜಾರಿ ರಾಜಪ್ಪ, ಬಿ.ಟಿ. ಬೋರಯ್ಯ,
ಶ್ರೀ ಪಾಂಡುರಂಗ ಸ್ವಾಮಿ ಭಕ್ತರು ಸದ್ಭಕ್ತರು ಹಾಗೂ ಸಮಸ್ತ ಮಲೇಬೋರನಹಟ್ಟಿ ಗ್ರಾಮಸ್ಥರು ವಿವಿಧ ಹಳ್ಳಿಯ ಭಕ್ತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!