ಚಳ್ಳಕೆರೆ :
ಚಿತ್ರದುರ್ಗ: ಅಡಿಕೆಮರಗಳಿಗೆ ಕತ್ತರಿ: ಮುಗಿಲು
ಮುಟ್ಟಿದ ಮಹಿಳೆ ಆಕ್ರಂದನ
ಫಲಕ್ಕೆ ಬಂದಿದ್ದ ಅಡಿಕೆ ಗೊನೆಯನ್ನು ಹಿಡಿದು ಗೋಳು ಎಂದು
ರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದು ಹೊರಳಾಡಿದ ಘಟನೆ
ಚಿತ್ರದುರ್ಗದ ಡಿಸಿ ಸರ್ಕಲ್ ನಲ್ಲಿಂದು ನಡೆಯಿತು. ಚಿತ್ರದುರ್ಗದ
ನಂದಿಪುರ ಗ್ರಾಮದ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆಂದು, ಸಣ್ಣ
ನೀರಾವರಿ ಇಲಾಖೆ ಅಧಕಾರಿಗಳು ಮಹಿಳೆಯ ತೋಟದಲ್ಲಿರುವ
ಫಲಕ್ಕೆ ಬಂದಿದ್ದ ಅಡಿಕೆ ಮರಗಳನ್ನು, ಕಡಿದು ಹಾಕಿದ್ದಾರೆ. ಇದರಿಂದ
ಮಕ್ಕಳಂತೆ ಸಾಕಿದ್ದ ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆಂದು
ಮಹಿಳೆ ಗೋಳಾಡಿದ್ದು, ಅವಳ ಆಕ್ರಂದನ ಮನಕಲಕುವಂತಿತ್ತು.

