ಚಳ್ಳಕೆರೆ :
ಮೊಳಕಾಲ್ಕೂರು: ದಿಢೀರ್ ಸಭೆ ಮುಂದೂಡಿಕೆ ; ರೈತರ
ಪ್ರತಿಭಟನೆ
ಮೊಳಕಾಲೂರು ತಾಲೂಕು ಕಚೇರಿಯಲ್ಲಿಂದು ನಿಗದಿಯಾಗಿದ್ದ
ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಏಕಾಏಕಿ
ಮುಂದೂಡಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು
ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಳಪೆ
ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆ ಫಸಲ್ ಭೀಮಾ
ಯೋಜನೆ ಅನ್ಯಾಯ ಸೇರಿದಂತೆ ಹಲವು ಸಮಸ್ಯೆ ಬಗ್ಗೆ ಚರ್ಚೆ
ನಡೆಸಲು ಆಗ್ರಹಿಸಿ, ಚಿತ್ರದುರ್ಗದಲ್ಲಿ ಎರಡು ಬಾರಿ ಪ್ರತಿಭಟನೆ
ಮಾಡಲಾಗಿತ್ತು. ಅಲ್ಲಿ ರೈತರಿಗೆ ಅನ್ಯಾಯವಾಗುವಂತೆ ಜಿಲ್ಲಾಡಳಿತ
ನಡೆದುಕೊಂಡಿದೆ ಎಂದು ದೂರಿದರು.

