ಚಳ್ಳಕೆರೆ :
ಚಿತ್ರದುರ್ಗ: ಚುರುಕುಮುಟ್ಟಿಸಲು ನಾಳಿನ ಮಾದಿಗರ
ಹೋರಾಟ ನಡೆಯಲಿದೆ
ಮೂರವರೆ ದಶಕಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ,
ಚಳುವಳಿ ಮಾಡಿದ್ದೇವೆ. ಮಾದಿಗರ ಮತ ಪಡೆದ ಕಾಂಗ್ರೆಸ್
ಪಕ್ಷ ನಮ್ಮನ್ನು ನಡು ಬೀದಿಯಲ್ಲಿ ನಿಲ್ಲಿಸಿದೆ ಎಂದು ಮಾದಿಗ
ಸಮುದಾಯದ ಮುಖಂಡ ಜಿಹೆಚ್ ಮೋಹನ್ ಆಕ್ರೋಶ ಹೊರ
ಹಾಕಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಸುಪ್ರೀಂಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸಲು ತೀರ್ಪು ನೀಡಿ
1 ವರ್ಷವಾಗುತ್ತದೆ. ಅಧಿವೇಶನದಲ್ಲಿ ಒಳಮೀಸಲಾತಿ ವಿಷಯ
ಮಂಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ
ಎಂದು ಎಚ್ಚರಿಸಿದರು.

