ಚಳ್ಳಕೆರೆ :
ಚಿತ್ರದುರ್ಗ: ಮೊಬೈಲ್ ಕದ್ದು ಪರಾರಿ: ಸಿಸಿ ಟಿವಿಯಲ್ಲಿ
ದೃಶ್ಯ ಸೆರೆ
ಚಿತ್ರದುರ್ಗದ ಹೊಳಲ್ಕೆರೆ ರಸ್ತೆ ಸಂಗೊಳ್ಳಿ ಕ್ಲಿನಿಕ್ ನಲ್ಲಿ ಕಳ್ಳತನದ
ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 2 ದಿನಗಳ ಹಿಂದೆ ಘಟನೆ
ನಡೆದಿದ್ದು, ಇಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ಲಿನಿಕ್ ಒಳಗೆ
ಬಂದ ಯುವಕ 50 ಸಾವಿರದ ಮೊಬೈಲ್ ಫೋನ್ ಕದ್ದು
ಪರಾರಿಯಾಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಚಾರ್ಜ್ ಗೆ ಇಟ್ಟಿದ್ದ ಮೊಬೈಲ್
ಕದ್ದು ಕಾಲ್ಕಿತ್ತಿದ್ದಾನೆ. ಕೋಟೆ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ
ಸಿಬ್ಬಂದಿಗಳು ಪ್ರಕರಣ ದಾಖಲಿಸಿದ್ದು, ಪೊಲೀಸರು ಕಳ್ಳನ ಪತ್ತೆಗೆ
ಬಲೆ ಬೀಸಿದ್ದಾರೆ.

