“ಕಾರ್ತಿಕ ಮಾಸದ ಪ್ರಯುಕ್ತ ಶಿವನ ವಿಶೇಷ ಭಜನೆ”. ಚಳ್ಳಕೆರೆ:-ನಗರದ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಯಜಮಾನಿ” ಅಧ್ಯಾಯವನ್ನು ಓದಿ ರಾಧಿಯ ಮಗ ಬನುವಿನ ಕತೆಯನ್ನು ಹೇಳಿದರು. ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ,”ಕಾರ್ತಿಕ ಮಾಸ”ದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ಅವರಿಂದ ಶಿವನ ವಿಶೇಷ ಭಜನೆಗಳ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಮ್ಮ, ಕವಿತಾ ಗುರುಮೂರ್ತಿ, ಕಾವ್ಯ ಆಚಾರ್, ಗೌರಮ್ಮ , ಎಸ್.ಉಮಾ,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ನಾಗರತ್ನಮ್ಮ,ಕಿಶನ್ ಆಚಾರ್, ಭ್ರಮರಂಭಾ, ಗೀತಾಲಕ್ಷ್ಮೀ, ವಿಜಯಲಕ್ಷ್ಮಿ, ರಶ್ಮಿ ರಮೇಶ್,ಶೈಲಜಾ, ಕೃಷ್ಣವೇಣಿ, ಸಂಗೀತ, ರಶ್ಮಿ ವಸಂತ,ಸುಧಾಮಣಿ, ಸರಸ್ವತಿ, ಜಯಮ್ಮ,ಉಷಾ ಶ್ರೀನಿವಾಸ್, ಜಯಶೀಲಮ್ಮ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!