ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಇತಿಹಾಸ ಉಪನ್ಯಾಸಕ ಕೆ.ವಿ.ಚಂದ್ರಶೇಖರ್ ಮತ್ತು ಆಂಗ್ಲ ಉಪನ್ಯಾಸಕ ಡಿ.ಎಂ. ನಾಗಭೂಷಣ್ ಸ್ವಾಮಿ ಇವರುಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ ನಾನು ಚಂದ್ರಶೇಖರ್ ಹಾಗೂ ನಾಗಭೂಷಣ್ ಸ್ವಾಮಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಖಾಯಂಗೊಂಡು ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಬಂದವರು. ಚಂದ್ರಶೇಖರ್ ಒಬ್ಬ ಒಳ್ಳೆ ಇತಿಹಾಸ ತಜ್ಞ ಹಾಗೂ ರಾಷ್ಟ್ರೀಯ ಹಬ್ಬಗಳ ದಿನದಂದು ಉತ್ತಮ ಉಪನ್ಯಾಸ ನೀಡುತ್ತಿದ್ದರು ಅವರ ಸೇವೆ ಸ್ನಾನೀಯ ಎಂದರು
ಡಿ. ಎಂ.ನಾಗಭೂಷಣಸ್ವಾಮಿ ಒಬ್ಬ ಶಿಸ್ತು ಸಂಯಮ ಸರಳ ಸಜ್ಜನ ಕರ್ತವ್ಯ ಪಾಲನೆ ವ್ಯಕ್ತಿ. ತನ್ನ ಸೇವಾ ಅವಧಿಯಲ್ಲಿ ಎಂದು ತಪ್ಪುಗಳನ್ನೇ ಮಾಡದೆ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಪ್ರವಚನ ನೀಡಿ ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರರಾಗಿದ್ದಾರೆ ಹಾಗಾಗಿ ಇವರೊಬ್ಬರು ನೆಹರು ನಡೆದಾಡುವ ದೇವರು ಮತ್ತು ಸ್ವಾಮಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿ.

ನಾಗಭೂಷಣ ಸ್ವಾಮಿ ತನ್ನ ನಿವೃತ್ತಿ ಹೊಂದಿದ ದಿನದಂದು ಇಡೀ ಕಾಲೇಜಿನ ವಿದ್ಯಾರ್ಥಿಗಳಿಗೆ ಊಟವನ್ನು ಏರ್ಪಡಿಸಿ ಅನ್ನದ ಸ್ವಾಮಿ ಎಂದು ಕರೆಸಿಕೊಂಡಿದ್ದಾರೆ ಎಂದು ತಿಳಿಸಿದರು

ಪದವಿ ಪೂರ್ವ ಕಾಲೇಜು ಹನುಮನಾಳ ಪ್ರಾಚಾರ್ಯ ಟಿ. ಲಲಿತಮ್ಮ ಮಾತನಾಡಿ ಚಂದ್ರಶೇಖರ್ ಮತ್ತು ನಾಗಭೂಷಣ್ ಸ್ವಾಮಿಯಿಂದ ನಾನು ಆಡಳಿತ ಮತ್ತು ಪರೀಕ್ಷೆ ವಿಷಯಗಳ ಬಗ್ಗೆ ತಿಳಿದುಕೊಂಡು ಅವರ ಜ್ಞಾನವನ್ನು ನನ್ನ ಆಡಳಿತ ಸೇವೆಯಲ್ಲಿ ಅಳವಡಿಸಿಕೊಂಡಿದ್ದೇನೆ ಎಂದರು.

ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ ಶ್ರೀನಿವಾಸ್ ನಿವೃತ್ತ ಪ್ರಾಚಾರ್ಯ ಎಂ.ರವೀಶ್ ಉಪನ್ಯಾಸಕರಾದ ವೀರಣ್ಣ, ತಿಪ್ಪೇಸ್ವಾಮಿ ಎನ್ ಎಸ್ ಎಸ್ ಅಧಿಕಾರಿ ಶಾಂತಕುಮಾರಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಡಿ.ಎಂ. ನಾಗಭೂಷಣಸ್ವಾಮಿ ಮಾತನಾಡಿ ನನಗೆ ಅನ್ನ ಕೊಟ್ಟ ಮತ್ತು ಎಲ್ಲಾವನ್ನು ಕೊಟ್ಟ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಹಾಗೂ ಕಾಲೇಜಿಗೆ ಚುರಋಣಿಯಾಗಿರುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಕೆ. ರಾಜು ಮಾತನಾಡಿ ಸರ್ಕರಿ ಸೇವೆಗೆ ಸೇರಿದವರಲ್ಲಿ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎಂಬ ಎರಡು ಜೀವನಗಳಿರುತ್ತವೆ ಅದರಲ್ಲಿ ನಾಗಭೂಷಣ ಸ್ವಾಮಿ ವೈಯಕ್ತಿಕ ಜೀವನಕ್ಕಿಂತ ವೃತ್ತಿಜೀವನವನ್ನು ಹೆಚ್ಚು ಅಳವಡಿಸಿಕೊಂಡಿದ್ದರು ಎಂದು ಹೇಳಿ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್ ಲಕ್ಷ್ಮಣ ಪ್ರಾಚಾರ್ಯ ಟಿ ಲಲಿತಮ್ಮ ವಸಂತ್ ಕುಮಾರ್ ನಿವೃತ್ತ ಪ್ರಾಚಾರ್ಯ ಎಮ್ ರವೀಶ್ ಸಾಹಿತಿ ಬೆಳಗಟ್ಟ ನಾಗರಾಜ್ ಚಂದ್ರಶೇಖರ್ ಸೋಮಗುದ್ದು ಜಬಿವುಲ್ಲಾ ಈಶ್ವರಪ್ಪ ಡಾ. ರೇಖಾ ಹೀನ ಕೌಸರ್ ವೀರಣ್ಣ ಈಶ್ವರಪ್ಪ ತಿಪ್ಪೇಸ್ವಾಮಿ ಗ್ರಂಥಪಾಲಕ ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!