ಚಳ್ಳಕೆರೆ :
ದೋಡ್ಡಚೆಲ್ಲೂರು ಗ್ರಾಪಂ ಅಧ್ಯಕ್ಷರಾಗಿ ಎಚ್ ಪಟೇಲ್ ರಾಘವೇಂದ್ರ ಆಯ್ಕೆ.
ಪರಶುರಾಂಪುರ.
ಸಮೀಪದ ದೋಡ್ಡಚೆಲ್ಲೂರು ಗ್ರಾಪಂಯ ಅಧ್ಯಕ್ಷರಾಗಿ ಎಚ್ ಪಟೇಲ್ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ಸದಸ್ಯರ ಉಪಸ್ಥಿತಿಯಲ್ಲಿ ನಡೆದ
ಚುನಾವಣೆಯಲ್ಲಿ ಎಚ್ ಪಾಟೇಲ್ ರಾಘವೇಂದ್ರ ಅವರನ್ನು ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.
ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ್ದ ತಹಶೀಲ್ದಾರ್ ರೆಹಮಾನ್ ಪಾಷ ಅಧಿಕೃತವಾಗಿ ಘೋಷಣೆ ಮಾಡಿದರು.
ಸಂದರ್ಭದಲ್ಲಿ ಗ್ರಾಪಂ ನೂತನ ಅಧ್ಯಕ್ಷರಿಗೆ ನೆರೆದಿದ್ದವರು ಹೂಮಾಲೆ ಹಾಗೂ ಸಿಹಿ ಹಂಚಿ ಶುಭಾಶಯಗಳನ್ನು ತಿಳಿಸಿದರು.
ಈ ವೇಳೆಯಲ್ಲಿ ಗ್ರಾಪಂ ಸದಸ್ಯರು,ಹಿರಿಯರು,ಮುಖಂಡರು,ಗ್ರಾಮಸ್ಥರು ಬೆಂಬಲಿಗರು ಉಪಸ್ಥಿತರಿದ್ದರು.

