ಚಳ್ಳಕೆರೆ :
ಸೋಲು ಗೆಲುವಿಗಿಂತ ಕ್ರೀಡೆಯಲ್ಲಿ ಪಾಲ್ಗೊಳ್ಳುವದೇ ಮುಖ್ಯ -ಕೆಡಿಸಿ ಸದಸ್ಯ ಟಿ.ಬಸವರಾಜು.
ಪರಶುರಾಂಪುರ.
ಕ್ರೀಡೆಯಿಂದ ಯುವಜನರಲ್ಲಿ ನಾಯಕತ್ವ ಗುಣ ಮತ್ತು ಕ್ರೀಡಾ ಮನೋಭಾವ ಬೆಳೆಸಲು ಉಪಯುಕ್ತವಾಗಿವೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಪಾಲ್ಗೋಳ್ಳುವುದು ಮುಖ್ಯವಾಗಿದೆ ಎಂದು ಕೆಡಿಪಿ ಸದಸ್ಯ ಟಿ.ಬಸವರಾಜು ತಿಳಿಸಿದರು.
ಸಮೀಪದ ಚೌಳೂರು ಗ್ರಾಮದಲ್ಲಿ ಶುಕ್ರವಾರ ಸ್ನೇಹಜೀವಿ ಕ್ರಿಕೇಟರ್ಸ ವತಿಯಿಂದ ದಿವಂಗತ ಕೆಂಪುಗೌಡರ ಜಿ.ರುದ್ರಪ್ಪನವರ ಸವಿನೆನಪಿಗಾಗಿ ಆಯೋಜಿಸಿದ್ದ ಟೆನ್ನಿಸ್ ಬಾಲ್ ಟೂನ೯ಮೆಂಟ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಯುವಜನರು ಕ್ರೀಡ್ರೆಗಳ ಮಹತ್ವ ಅರಿತು, ಅಭಿವೃದ್ಧಿ ಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದರು.
ಈ ವೇಳೆಯಲ್ಲಿ ಗ್ರಾಪಂ ಸದಸ್ಯರ ಜತೆ ಕನ್ವಿನರ್,ವಿರೇಶ್ ಕುಮಾರ್, ಶಿವಮೂರ್ತಿ,ನಿಂಗಣ್ಣ, ಓಬಳೇಶ್, ಮಂಜುನಾಥ್,ಸಿದ್ದು, ವಿರೇಂದ್ರ,ನಾಗರಾಜ ಸೇರಿದಂತೆ ಸ್ನೇಹಜೀವಿ ಕ್ರಿಕೇಟರ್ಸ ಪದಾಧಿಕಾರಿಗಳು, ಹಿರಿಯರು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದ

