ಚಳ್ಳಕೆರೆ :
ಅಕ್ರಮವಾಗಿ ಖಾಸಗಿ ಲಾರಿಯಲ್ಲಿ ಪಡಿತರ ರಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ವಾಹನವನ್ನು ತಡೆದು ನಗರದ ಎಪಿಎಂಸಿ ಆವರಣದ ಗೋದಾಮಿನ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಎಂಬ ಸುದ್ದಿ ನಮ್ಮ ಚಳ್ಳಕೆರೆ ಟಿವಿ , ರಾತ್ರೋ ರಾತ್ರಿ ಪಡಿತರ ರಾಗಿ ತುಂಬಿದ ಲಾರಿ ಪೋಲಿಸ್ ಠಾಣೆಯಿಂದ ಬಿಡುಗಡೆ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಸಾರ ಮಾಡಿತ್ತು..
ಈ ಬೆನ್ನಲ್ಲೆ ತಹಶಿಲ್ದಾರ್ ಹಾಗೂ ಆಹಾರ ಇಲಾಖೆ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಗೋದಾಮು ನಿರ್ವಾಹಕರಿಗೆ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಲು ಈಗಾಗಲೇ ಕಾರಣ ಕೇಳಿ ನೋಟಿಸ್ ನೀಡಿದೆ ಉತ್ತರ ಬಂದ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶಿಲ್ದಾರ್ ರೇಹಾನ್ ಪಾಷ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಗೋದಾಮು ನಿರ್ವಾಹಕ ಪ್ರವೀಣ್, ತಾಲ್ಲೂಕು ಆಹಾರ ಗೋದಾಮಿನ ನಿರ್ವಾಹಕ ಹನುಮಂತಪ್ಪ,
ತಾಲೂಕು ಪಂಚಾಯಿತಿ ಇಒ ಶಶಿಧರ್, ಉಪ ತಹಶೀಲ್ದಾರ್ ಸದಾಶಿವಪ್ಪ ಆಹಾರ ನಿರೀಕ್ಷಕ ಶ್ರೀನಿವಾಸ್, ಚಳ್ಳಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ ಕುಮಾರ್ ಉಪಸ್ಥಿತರಿದ್ದರು.


