ಚಳ್ಳಕೆರೆ :
ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಸ್ವಂತ ಸೂರು ಇಲ್ಲದೆ, ಬಾಡಿಗೆ ಮನೆಗಳಲ್ಲಿ ವಾಸ ಮಾಡುವಂತಹ ಬಡ ಜನರು ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಬಹುದು ಎಂದು ನಗರಸಭೆ ನೂತನ ಅಧ್ಯಕ್ಷೆ ಬಿ.ಶಿಲ್ಪ ಮುರುಳಿಧರ್ ಹೇಳಿದರು.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಜಿ.ಪ್ಲಸ್ ಟು ಮನೆಗಳ ಜಾಗೃತಿ ಅಭಿಯಾನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜೀವ್ ಗಾಂಧಿ ವಸತಿ ನಿಗಮ,
ಪ್ರಧಾನ ಮಂತ್ರಿ ಆವಾಸ್ ಯೋಜನೆ “ಸರ್ವರಿಗೂ ಸೂರು” ಎಹೆಚ್ ಪಿ ಯೋಜನೆಯಡಿ ಪಾವಗಡ ರಸ್ತೆಯ
ಕೆ.ಹೆಚ್.ಬಿ ಲೇಔಟ್ನಲ್ಲಿ 1008 ಜಿ+2 ಮಾದರಿಯ ಮನೆಗಳ ನಿರ್ಮಾಣದ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ಮೂಲಕ ಚಳ್ಳಕೆರೆ ನಗರಸಭಾ ವ್ಯಾಪ್ತಿಯ ಸಮಸ್ತ ನಾಗರೀಕರಿಗೆ ಈ ಯೋಜನೆ ಪಡೆದು ಸ್ವತಃ ಸೂರು ನಿಮ್ಮದಾಗಿಸಿಕೊಳ್ಳಿ ಎಂದರು.
ಇನ್ನೂ ಉಪಾಧ್ಯಕ್ಷೆ ಕವಿತಾ ಬೋರಯ್ಯ ಮಾತನಾಡಿ, ಸ್ಥಳೀಯ ಶಾಸಕರು ಒತ್ತಾಸೆಯ ಮೇರೆಗೆ ನಗರದಲ್ಲಿ ಗುಡಿಸಲು ಮುಕ್ತ ಹಾಗೂ ಮನೆ ನೀಡುವ ಮಹತ್ವ ಕಾಂಕ್ಷಿ ಯೋಜನೆ ಇದಾಗಿದೆ ಅದರಂತೆ
ಪ್ರಧಾನ ಮಂತ್ರ
ಯೋಜನೆ (ನಗರ) “ಸರ್ವರಿಗೂ ಸೂರು” ಎಹೆಚ್ ಪಿ ಯೋಜನೆಯಡಿ ರಿಸನಂ
56,57,58
ಮತ್ತು 722 ರಲ್ಲಿ ಜಿ+2 ಮಾದರಿಯ (ಬಹುಮಹಡಿ) 1008 ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ
ಅನುಮೋದನೆಗೊಂಡು ನಗರ ಆಶ್ರಯ ಸಮಿತಿ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಈಗಾಗಲೇ ಸುಮಾರು 300 ಮನೆಗಳು ಸಜ್ಜಾಗಿತ್ತು ಇನ್ನೂರು ಫಲಾನುಭವಿಗಳು ತಲಾ ಹತ್ತು ಸಾವಿರ ರೂಪಾಯಿಗಳನ್ನು ವಂತಿಕೆ ಕಟ್ಟಿದ್ದಾರೆ,
ಆಯ್ಕೆಯಾದ ಫಲಾನುಭವಿಗಳು ಅಥವಾ ಆಸಕ್ತ ಹೊಸ ಅರ್ಜಿದಾರರು ಸಂಬಂಧಪಟ್ಟ ದಾಖಲೆಗಳನ್ನು ನಗರಸಭೆ
ಕಛೇರಿಗೆ ನೀಡಿ ಫಲಾನುಭವಿ ವಂತಿಕೆ ಪಾವತಿಸಿ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಮಾತನಾಡಿ,
ಈಗಾಗಲೇ 300 ಮನೆಗಳು ಪೂರ್ಣಗೊಂಡಿದ್ದು ಸದರಿ ಮನೆಗಳನ್ನು
ಅತೀ ತುರ್ತಾಗಿ ಅರ್ಹ ವಸತಿ ರಹಿತ ಕುಟುಂಬದವರಿಗೆ ನೀಡುವ ಉದ್ದೇಶದಿಂದ ಈಗಾಗಲೇ ದಿನಾಂಕ:14/07/2025
ರಿಂದ 25/07/2025 ರವರೆಗೆ ನಗರದ 31 ವಾರ್ಡ್ಗಳಲ್ಲಿ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು,
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದರು
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ರಮೇಶ ಗೌಡ, ಮುರುಳಿಧರ್, ಖಾದರ್, ಬೋರಯ್ಯ, ನಗರಸಭೆ ವಸತಿ ಇಲಾಖೆಯ ಅಧಿಕಾರಿ ಭೂತಯ್ಯ,
ಇತರರು ಇದ್ದರು.


