filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಚಳ್ಳಕೆರೆ : ರೈತರ ಹುತಾತ್ಮ ದಿನಾಚರಣೆ ಅಂಗವಾಗಿ ಅವರ ಸವಿನೆನಪಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ರೋಟರಿ ಬಲ ಭವನದಲ್ಲಿ ರೈತ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಸೋಮಗುದ್ದು ರಂಗಸ್ವಾಮಿ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನವಲಗುಂದ ನರಗುಂದ ಪ್ರದೇಶದಲ್ಲಿ ಪೋಲಿಸ್ ರ
ಗೋಲಿಬಾರಿಗೆ ಸುಮಾರು 139 ರೈತರು ಹುತಾತ್ಮರಾದ ದಿನ ಸ್ಮರಿಸುವಂತೆ ಈ ಪ್ರದೇಶಗಳಲ್ಲಿ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಆ ಸ್ಥಳಕ್ಕೆ ಭೇಟಿ ನೀಡಿ ರೈತರ ಹುತಾತ್ಮರ ಸ್ಮರಿಸುತ್ತಿದ್ದೆವೆ, ಆದರೆ ಈ ವರ್ಷ ನಮ್ಮ ಚಳ್ಳಕೆರೆ ನಗರದಲ್ಲಿ ರೈತರ ಸವಿನೆನಪಿಗಾಗಿ ಕಲ್ಪವೃಕ್ಷ ನೆಡುವುದರ ಮೂಲಕ ದಿನಾಚರಣೆಯನ್ನು ಆಚರಿಸುತ್ತೇವೆ. ಅದರಂತೆ ನಗರದ ಇಂಜಿನಿಯರ್ ಕಾಲೇಜು, ಜಿ ಟಿ ಸಿ ಕೇಂದ್ರ ಆವರಣದಲ್ಲಿ ಪ್ರತಿ ಹುತಾತ್ಮರಾದ ರೈತನ ನೆನಪಿಗಾಗಿ ಕಲ್ಪವೃಕ್ಷ ನೀಡುವುದರ ಮೂಲಕ ಅವರ ನೆನಪು ಚಿರ ಸ್ಮರಣಿಯ ಆಗುವ ರೀತಿಯಲ್ಲಿ ರೈತರ ನೆನಪು ಅಜರಾಮರಾಗಿರುವಂತೆ ನೋಡಿಕೊಳ್ಳಲಾಗುತ್ತದೆ.

ಎಲ್ಲಾ ರೈತ ಸಂಘದ ಮುಖಂಡರುಗಳು ಪದಾಧಿಕಾರಿಗಳು, ರೈತರು ಸಭೆಗೆ ಭಾಗವಹಿಸಿ ರೈತರ ಹುತಾತ್ಮ ದಿನಾಚರಣೆಗೆ ಸ್ಮರಿಸುವ ದಿನಾಚರಣೆ ಆಗುವಂತೆ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿ ನಾಗರಾಜ್ , ವೆಂಕಟರಮಣಪ್ಪ ಇತರರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!